ಸಂಭ್ರಮದಿಂದ ನಡೆದ ಶ್ರೀ ಮರಗಮ್ಮ ದೇವಿ ಜಾತ್ರೆ 210 ಕೆ.ಜಿ.ಭಾರ ಎತ್ತಿದ ಪೈಲವಾನ ಕರೇಪ್ಪ ಹೊಸಮನಿ
ಯಡ್ರಾಮಿ:ಜೂ.1:ಪಟ್ಟಣದಲ್ಲಿ ಪ್ರತಿವರ್ಷದಂತೆನ ಈ ವರ್ಷವೂ ಕೂಡ ಸಕಲ ವಾಧ್ಯಗಳೊಂದಿಗೆ ಅತೀ ಸಂಭ್ರಮದಿಂದ ಶ್ರೀ ಮರಗಮ್ಮ ದೇವಿಯ ಜಾತ್ರಾ ಮಹೋತ್ಸವ ಜರುಗಿತ್ತು.
ಶುಕ್ರವಾರ ಬೆಳಿಗ್ಗೆ 11 ಘಂಟೆಯಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಡೊಳ್ಳು ಕುಣಿತ ಹಲಗೆ ಕುಣಿತ ಬಾಜಾ ಬಜಂತ್ರಿಯೊಂದಿಗೆ ದೇವಿಯೂ ಗಂಗಾಸ್ಥಾನಕ್ಕೆ ಹೋಗಿ ಗಂಗಾಸ್ಥಾನ ಮುಗಿಸಿಕೊಂಡು.
ದೇವಿಯೂ 6 ಘಂಟೆಗೆ ತಳಗಾಯಿ ಗುಡಿಯ ಹತ್ತಿರ ಬಂದು ಭಕ್ತಾಧಿಗಳಿಗೆ ದರ್ಶನ ನೀಡಿ.ಗ್ರಾಮದ ಸರ್ವಜನಾಂಗದ ನೈವೇಧ್ಯ ಸ್ವೀಕರಿಸಿದಳು.ನಂತರ ಮೂಲ ದೇವಿಯ ಗುಡಿಯನ್ನು ಪ್ರವೇಶ ಮಾಡಿದಳು.
ಜಾತ್ರಾಮಹೋತ್ಸವದ ನಿಮೀತ್ಯ ಬಾರ ಎತ್ತುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.ಕಲಬುರಗಿ ಹಾಗೂ ಬಿಜಾಪುರದ ಪೈಲವಾನರು ಹಲವಾರು ಜನರು ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ ನೂರು ಕೆ.ಜಿಯಿಂದ ಪ್ರಾರಂಭವಾಗಿ 200 ವರೆಗೂ ಹಲವಾರು ಸ್ಪರ್ಧಿಗಳು ಬಾರ ಎತ್ತಿದರು.ನಂತರ ಕೊನೆಯದಾಗಿ ಕರೇಪ್ಪ ತಂದೆ ಜೇಟ್ಟಪ್ಪ ಹೊಸಮನಿ ಎಂಬ ಯಡ್ರಾಮಿಯ ಪೈಲವಾನ 210 ಕೆ.ಜಿ ಎತ್ತುವ ಮೂಲಕ ಜಯಗಳಿಸಿದನು.
ಗೆದ್ದ ಪೈಲವಾನನಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಮಾಡಿದರು.ನಂತರ ಮರಗಮ್ಮ ದೇವಿಯ ಕಮೀಟಿಯ ಅವರು ಬೆಳ್ಳಿಯ ಕಡಗವನ್ನು ತೊಡಿಸಿ ಪೈಲವಾನನಿಗೆ ಪೆÇ್ರೀತ್ಸಾಹಿಸುವ ಕಾರ್ಯ ಮಾಡಿದರು.