ವಕ್ಕಲಗ್ಯಾ ನಿಟ್ಟ ಒಟ್ಟತಾನ , ಮಾನವನಿಗೆ ರೋಗೊಂದು ಕಾಡ್ತದಮಳೆ ಸಿಡಿಲು ಗಾಳಿ ಉಕ್ಕಿ ಬರ್ತದ ; ಮಾನವರು ಜ್ವಾಕಿಂದಿರಿ
ತಾಳಿಕೋಟೆ:ಜೂ.1: ಈ ಸಲ ಮಳೆ ಎರಡು ಪಟ್ಟ ಅದ ಉತ್ತಮ ಮಳಿಯಿಂದ ಹುಲಸಾದ ಬೆಳೆ ಬರ್ತದ ಅದರ ಜೊತೆ ಗಾಳಿ, ಸಿಡಿಲು ತುಂಬಿ ತುಳಕಿ ಬರತದ ಮಾನವರಿಗೆ ರೋಗವೊಂದು ಕಾಡತದ ಜೀವ ಜ್ವಾಕಿಂದ ನೋಡಿಕೊಳ್ಳಿ…..
ಇದು ಶುಕ್ರವಾರರಂದು ಪಟ್ಟಣದ ಶ್ರೀ ಗ್ರಾಮದೇವಿ(ದ್ಯಾಮವ್ವದೇವಿ) ಉಡಿ ತುಂಬುವ ಕಾರ್ಯಕ್ರಮದಲ್ಲಿ ಅರ್ಚಕನಿಂದ ಕೇಳಿ ಕಂಡು ಬಂದ ಹೇಳಿಕೆಗಳು ಇವು……. ಈ ಸಲ ವಕ್ಕಲಗ್ಯಾಗ(ರೈತರಿಗೆ) ಒಂದು ನಿಟ್ಟು ಉಳಿಸಿನಿ ಸಂತಸ ಪಟ್ಟುಕೊಳ್ಳು ಅಂಬಲಿಟ್ಟು ದುಡಿದವನ ತಲಬಾಗಿಲ ಮ್ಯಾಗ ಹಿಂಬಡಾ ಊರಿ ನಿಂತಿನಿ ಮಗ ಈ ಸಲ ಚಿಂತಿ ಬಿಡು ಹೋಗೋರ ಓಣಿ, ಬರೋರ ಮಿರ್ಗಾ, ನಾಲ್ಕು ಮೂಲಿ ಹಸಿ ಮಾಡಿನಲೇ ಮಗಾ ಆದರ ಆರಿದ್ರೂ ಕೂಡಾ ಎರಡೂ ತುಳಕು ಕೊಟ್ಟಿನಿ…. ಆದರ ಭೂಮಿ ಮ್ಯಾಗ ಅಂಬಲ ಇಟ್ಟವನ ನಿಟ್ಟ ನಿಂ ನೋಡಂಗಾಗೈದ, ಅಂಬಲ ತಪ್ಪಿದವನ ನಿಟ್ಟ ನಾ ಕುಂತ್ರನೂ ಕಣ್ಣಿಗೆ ಕಾಣೊಲ್ಲೊದು…. ನಾ ಅಂದವನ ವನ್ನಾ ಅಂಗೈಯನಾ ವನ್ನಾ ಮಾಯವಾಗೈದ ನೀ ಅಂದವನ ವನ್ನಾ ತುಂಬಿ ತುಳಕೈದ ಈ ಸಲ ಭೂಮಿ ಮ್ಯಾಗ ಮಾನವನಿಗೆ ರೋಗ ಕಾಟ ಬರ್ತದ ಜೀವ ಜ್ವಾಕಿ ಇಟ್ಟುಕೊಳ್ಳಲೇ ಮಗ…. ಕಾಲಮಾನ ಬಾಳ ಸೂಕ್ಷ್ಮೀ ಬರಕತದ ಜ್ವರ, ಕಾಲರಾ ಬರ್ತದ ಬಲ ಎಚ್ಚರದಿಂದ ಇರು, ಈ ಸಲ ಬೆಳೆ ಕೆಂಪ ಕಾಳ, ಬಿಳಿ ಕಾಳ ಬರ್ತದ ನಂಬಗಿಟ್ಟು ನಡೆದವನಿಗೆ ತೊಟ್ಟಿಲಿಟ್ಟು ತೂಗತೈದ…… ನಿಮ್ಮೆಲ್ಲರ ಹಿಂದ ದ್ಯಾಮ್ಮವ್ವ ಅಂದಿನ ಅಂದಾಳ ಇವು ಶ್ರೀ ಗ್ರಾಮದೇವಿ ಉಡಿ ತುಂಬುವ ಕಾರ್ಯಮದಲ್ಲಿ ಹೇಳಿಕಿ ಆಗಿದ್ದು.