ದರೋಡೆ ಪ್ರಕರಣ ಬೇಧಿಸಿದ ಪೋಲೀಸರು;ಮೂವರ ಬಂಧನ


ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಜೂ.೧; ಕಳೆದು 15 ದಿನಗಳ ಹಿಂದೆ ತಾಲೂಕಿನ ಕಂಚಿಕೇರಿ ರಸ್ತೆಯಲ್ಲಿ ಉಪಕಾರಗೃಹ ಬಳಿ ನಡೆದಿದ್ದ ದರೋಡೆ ಪ್ರಕರಣವನ್ನು ಇಲ್ಲಿಯ ಪೋಲೀಸರು ಬೇಧಿಸಿ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.ಈ ಕುರಿತು ಪತ್ರಿಕಾ ಗೋಷ್ಠಿ ನಡೆಸಿದ ಡಿವೈಎಸ್ಪಿ ವೆಂಕಟಪ್ಪ ನಾಯಕ ಅವರು ಮಾಹಿತಿ ನೀಡಿದ್ದು, ಮೆ.16 ರಂದು ಬೆಳಗಿನ ಜಾವ 2 ಗಂಟೆಗೆ ಕಂಚಿಕೇರಿ ರಸ್ತೆಯಲ್ಲಿ ಗಂಗಾವತಿಯಿಂದ ದಾವಣಗೆರೆಗೆ ನಲವತ್ತಾರು ಲಕ್ಷ ಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಕಾರನ್ನು ಮತ್ತೊಂದು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ತಡೆದು ಕಾರ್ ಸಮೇತ ಹಣವನ್ನು ದರೋಡೆ ಮಾಡಿದ ಪ್ರಕರಣವನ್ನು ಇಲ್ಲಿಯ ಪೋಲೀಸರು ಭೇದಿಸುವಲ್ಲಿಯಶಸ್ಲಿಯಾಗಿದ್ದಾರೆ.ನೊಂದ ವ್ಯಕ್ತಿಯ ಕಾರಿನಲ್ಲಿಯೇ ಕುಳಿತು ಸಂಚು ರೂಪಿಸಿದ್ದ ಒಬ್ಬನನ್ನು ಸೇರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಒಟ್ಟು ಆರು ಜನರಲ್ಲಿ ರವಿ ಅಲಿಯಾಸ್‌ ಬಾದಶಾ ರವಿ (29), ವಿ.ಸುನಿಲ್ ಕುಮಾರ,(32) ಇವರು ಗಂಗಾವತಿಯವರಾಗಿದ್ದು, ರಾಜಹುಸೇನ್ (25) ಬಳ್ಳಾರಿಯವರಾಗಿದ್ದಾರೆ. ಈ ಮೂವರನ್ನು ಬಂಧಿಸಲಾಗಿದೆ.ಉಳಿದ ಮೂವರು ತಲೆಮರೆಸಿಕೊಂಡಿದ್ದಾರೆ. ಬಂಧಿತರಿಂದ ದರೋಡೆ ಮಾಡಿದ ಹಣದಲ್ಲಿ 10,33000 ನಗದು , 20 ಸಾವಿರ ಬೆಲೆ ಬಾಳುವ 2 ಮೊಬೈಲ್‌ ಗಳು, 14 ಲಕ್ಷ ಬೆಲೆ ಬಾಳುವ 2 ಕಾರುಗಳನ್ನು ಮತ್ತು ದರೋಡೆಗೆ ಬಳಸಿದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.ತನಿಖಾ ಕಾರ್ಯ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.