ವಿಧಾನ ಪರಿಷತ್ ಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಬಸವರಾಜ್ ಹೆಸರು ಮುಂಚೂಣಿಯಲ್ಲಿ

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೧: ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಗೆ ಶತಕ ದಾಟಿದ್ದ ಆಕಾಂಕ್ಷಿಗಳ ಪಟ್ಟಿ ಶಾರ್ಟ್ ಲಿಸ್ಟ್ ಅಂತಿಮ ಹಂತಕ್ಕೆ ಬಂದಿದ್ದು, ಪರಿಶಿಷ್ಟ ಜಾತಿಯ ಖೋಟಾದಡಿ ಭೋವಿ ಸಮುದಾಯದ ಡಿ. ಬಸವರಾಜ್ ಹೆಸರು ಮುಂಚೂಣಿಯಲ್ಲಿದೆ ಎಂದು ತಿಳಿದು ಬಂದಿದೆ. ಬುಧವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರುಗಳೊಂದಿಗೆ ಚರ್ಚಿಸಿ ಶಾರ್ಟ್ ಲಿಸ್ಟ್ ಅಂತಿಮ ಹಂತಕ್ಕೆ ಬರಲಾಗಿದೆ.ಕೆಪಿಸಿಸಿ ಪ್ರಧಾನ‌ಕಾರ್ಯದರ್ಶಿಡಿ. ಬಸವರಾಜ್ ರವರು ಕಳೆದ ನಾಲ್ಕು ದಶಕಗಳಿಂದ ವಿದ್ಯಾರ್ಥಿ ಕಾಂಗ್ರೆಸ್ ನಿಂದ  ಬಂದವರು ಯುವಕ ಕಾಂಗ್ರೆಸ್, ಕಾಂಗ್ರೆಸ್ ಸೇವಾದಳ ಸೇರಿದಂತೆ ಕೆಪಿಸಿಸಿ ಚುನಾಯಿತ ಸದಸ್ಯರಾಗಿ, ಕೆಪಿಸಿಸಿ ಕಾರ್ಯದರ್ಶಿಯಾಗಿ, ಪ್ರಸ್ತುತ ಕೆಪಿಸಿಸಿ ಪ್ರದಾನ ಕಾರ್ಯದರ್ಶಿಯಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಡಿ. ಬಸವರಾಜ್ ಎಂಎಲ್ ಎ ಹಾಗೂ ಎಂಪಿ ಟಿಕೇಟ್ ಗಾಗಿ ಪ್ರಯತ್ನ ಪಟ್ಟಿದ್ದರು. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಇವರಿಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಈ ಬಾರಿ ಎಂಎಲ್ ಸಿ ಟಿಕೇಟ್ ಸಿಗುವ ಸಂಭವ ಇದೆ ಎಂದು ತಿಳಿದು ಬಂದಿದೆ.