ಚಿತ್ರ ಬಿಡುಗಡೆ ರದ್ದತಿಗೆ ಆಗ್ರಹಿಸಿ ಅಂಜುಮನ್ ಖಿದ್ಮತೆ ಇಸ್ಲಾಮ್ ಮನವಿ
ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ1: ದೇಶಾದ್ಯಂತ ಜೂನ್ 07 ರಂದು ಬಿಡುಗಡೆಯಾಗಲಿರುವ  “ ಹಮ್  ದೋ ಹಮಾರೆ ಬಾರಾ “ ಎಂಬ ವಿವಾದಾತ್ಮಕ ಸಿನಿಮಾವನ್ನು ಬಿಡುಗಡೆ ಮಾಡದೇ ರದ್ದು ಮಾಡಲು ಒತ್ತಾಯಿಸಿ
ಅಂಜುಮನ್ ಖಿದ್ಮತೆ ಇಸ್ಲಾಮ್ ಕಮಿಟಿಯ ಹಾಗು ಸಮುದಾಯದವರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಅಂಜುಮನ್ ಖಿದ್ಮತೆ ಇಸ್ಲಾಮ್ ಕಮಿಟಿಯ ಅಧ್ಯಕ್ಷ ಹೆಚ್ ಎನ್ ಮೊಹಮ್ಮದ್ ಇಮಾಮ್ ನಿಯಾಜಿರವರು ನೇತೃತ್ವದ ತಂಡ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಸಲ್ಲಿಸಿ ಮಾತನಾಡಿ  ಜೀ ಸಿನಿಮಾ ವಾಹಿನಿಯು ಇತ್ತೀಚೆಗೆ “ ಹಮ್ ದೋ ಹಮಾರೆ ಬಾರಾ “ ಎಂಬ ಚಲನಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು, ಇದರಲ್ಲಿ ಅಲ್ಲಾಹುವಿನ ಪವಿತ್ರ ಗ್ರಂಥ ಖುರಾನ್ ಶರೀಫ್ ರಲ್ಲಿ ಇರುವ “ ಸೂರೆ-ಎ-ಬಕರ” ಸಾಲಿನಲ್ಲಿನ ಉಪದೇಶಗಳನ್ನು ಹಾಗು ಸಂದೇಶಗಳನ್ನು ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ತಪ್ಪಾಗಿ ಗ್ರಹಿಸಿ ಅಪಾರ್ಥ ಸೃಷ್ಟಿಸಿ ಪ್ರಚೋದನಾತ್ಮಕ ಹಾಗೂ ಅವಹೇಳನಕಾರಿಯಾಗಿ ಚಿತ್ರಿಸಿ ಸಮಾಜದಲ್ಲಿ ಧರ್ಮಗಳ ಮಧ್ಯೆ ಗೊಂದಲ ಉಂಟು ಮಾಡಿದ್ದಾರೆ.  ಯಾವುದೇ ಸಿನಿಮಾ ಒಂದು ಸಮುದಾಯವನ್ನು ಅವಹೇಳನ ಮಾಡಬಾರದು, ಸಿನಿಮಾ ಎಂದರೆ ಅದು ಮನರಂಜನೆ ಮಾತ್ರ, ಮನರಂಜನೆಯ ಮೂಲಕ ಉತ್ತಮ ಸಂದೇಶಗಳನ್ನು ನೀಡಬೇಕೆ ಹೊರತು ಕೆಟ್ಟ ಸಂದೇಶಗಳನ್ನಲ್ಲ, ಈ ಚಿತ್ರದ ಟ್ರೇಲರ್ ನೋಡಿದರೆ ಸಾಕು, ಇದು ಮುಸ್ಲಿಂ ಸಮುದಾಯವನ್ನೇ ಕೆಣುಕುವಂತಿದೆ, ಒಬ್ಬ ಮಹಿಳೆಯ ಬಗ್ಗೆ ಈ ರೀತಿಯ ಕೆಟ್ಟ ಭಾವನೆಗಳನ್ನು  ಪ್ರಚೋದನೆಯನ್ನು ನೀಡಬಾರದು.
 ನಾವೆಲ್ಲರೂ  ಮನುಷ್ಯರು, ಇಲ್ಲಿ ಮನುಷ್ಯತ್ವವೇ ಮುಖ್ಯ, ಮಾನವೀಯತೆ ಮಿಡಿಯದ ಸಿನಿಮಾಗಳು ಖಂಡಿತ ಸಮಾಜದಲ್ಲಿ ಇರಬಾರದು, ಈ ಸಿನಿಮಾ  ಬಿಡುಗಡೆಯಾದರೇ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗುತ್ತದೆ ಹಾಗೂ ಕೋಮುಗಲಭೆ ಸೃಷ್ಠಿಯಾಗಲು ಕಾರಣವಾಗುತ್ತದೆ. ನಿರ್ಮಾಪಕರು ಹಾಗೂ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ಒತ್ತಾಯಿಸಿದರು.
ಆಫೀಸ್ ಅಬ್ದುಲ್ ಸಮದ್, ಅಂಜುಮನ್ ಕಮಿಟಿಯ ಉಪಾಧ್ಯಕ್ಷ ಎಮ್ ಫಿರೋಜ್ ಖಾನ್, ಕಾರ್ಯದರ್ಶಿ ಎಮ್.ಡಿ. ಅಬೂಬಕ್ಕರ್, ಖಾಜಾಂಚಿ ಜಿ. ಅನ್ಸರ್ ಭಾಷ, ಸಹಕಾರ್ಯದರ್ಶಿಗಳಾದ ಡಾ.ಎಮ್.ಡಿ. ದುರ್ವೇಶ್ ಮೈನುದ್ದಿನ್ ಹಾಗು ಸದ್ಯಸರಾದ  ಕೋತ್ವಾಲ್ ಮೊಹಮ್ಮದ್ ಮೋಸಿನ್ ಅಡ್ವಕೇಟ್ ಸದ್ದಾಮ್ ಹುಸೇನ್, ಎಲ್. ಗುಲಾಮ್, ಹಾಗೂ