ಹರಕೆಯ ಕುರಿ ಕಳವು

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೧; ದೇವರ ಹರಕೆಗೆಂದು ತಂದ ಕುರಿಗಳನ್ನೇ ಕಳ್ಳರು ಒತ್ತೋಯ್ದಿರುವ ಘಟನೆ ದಾವಣಗೆರೆ ಜಿಲ್ಲೆಯ ಮಾಯಕೊಂಡದಲ್ಲಿ ನಡೆದಿದೆ. ಪ್ರಭು ಎಂಬುವವರು ಕಳೆದ ಒಂದು ವರ್ಷದಿಂದಲೂ ಎರಡು ಕುರಿಗಳನ್ನು ದೇವರ ಹರಕೆಗೆಂದು ಸಾಕುತ್ತಿದ್ದರು. ಎಂದಿನಂತೆ  ಕುರಿಗಳಿಗೆ ಮೇವು ಹಾಕಿ ನೀರು ಕುಡಿಸಿ ಮಲಗಿದ್ದ ಪ್ರಭು ಬೆಳಗಿನ ಜಾವ ಎದ್ದು ನೋಡಿದಾಗ ಕುರಿಗಳು ಕಾಣದೇ ಇದ್ದಾಗ ಆತಂಕಗೊಂಡಿದ್ದಾನೆ ಈ ಬಗ್ಗೆ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್ ನಲ್ಲಿ ಬಂದ ಖದೀಮರು ಕುರಿಗಳನ್ನು ಒತ್ತೋಯ್ಯುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಸುಮಾರು ಐವತ್ತು ಸಾವಿರ ಮೌಲ್ಯದ ಕುರಿಗಳು ಇದಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.