ರವಿಚಂದ್ರನ್ ಅಭಿಮಾನಿಗಳ ಸಂಘದಿಂದ ಕ್ರೇಜಿಸ್ಟಾರ್ ಗೆ ಶುಭಹಾರೈಕೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೧: ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದ ದಾವಣಗೆರೆ  ಜಿಲ್ಲಾಧ್ಯಕ್ಷರಾದ ಎಂ.ಮನು ಅವರ ನೇತೃತ್ವದಲ್ಲಿ ಬೆಂಗಳೂರಿನ ರವಿ ಕಲಾ ನಿವಾಸದಲ್ಲಿ ಕ್ರೇಜಿಸ್ಟಾರ್ ಡಾ.ವಿ.ರವಿಚಂದ್ರನ್ ಅವರನ್ನು ಭೇಟಿ ಮಾಡಿ 63ನೇ ವರ್ಷದ ಹುಟ್ಟುಹಬ್ಬದ ಶುಭ ಕೋರಲಾಯಿತು.ಈ ವೇಳೆ ಎಂ.ಮನು ಅವರು ಮಾತನಾಡಿ ಚಿತ್ರನಟರ ಅಭಿಮಾನಿ ಸಂಘ ಕೇವಲ ಮನರಂಜನೆಗೆ ಸೀಮಿತವಾಗದೆ ಕಳೆದ 30 ವರ್ಷಗಳಿಂದ ರಾಜ್ಯಾಧ್ಯಕ್ಷರಾದ ಜೆ.ಕೆ ಮೋಹನ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಬಿ.ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿದೆಡೆ ಶೈಕ್ಷಣಿಕ ಆರೋಗ್ಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನ ಮನ್ನಣೆ ಗಳಿಸಿದೆ.ಕ್ರೇಜಿಸ್ಟಾರ್ ಡಾ.ವಿ.ರವಿಚಂದ್ರನ್ ಅವರು ತಮ್ಮ ಅತ್ಯಾಧುನಿಕ ತಾಂತ್ರಿಕತೆ ಹಾಗೂ ಹೊಸತನದ ಮೂಲಕ ಕನ್ನಡ ಚಿತ್ರರಂಗ ಭಾರತ ದೇಶದ ಎಲ್ಲಾ ಭಾಷೆ ಚಿತ್ರರಂಗದಲ್ಲಿ ಗುರುತಿಸುವಂತೆ ಮಾಡಿದ ಕೀರ್ತಿ ಹೊಂದಿದ್ದಾರೆ, ಈಚೆಗೆ ತೆರೆಕಂಡ ಜಡ್ಜ್ ಮೆಂಟ್ ಚಿತ್ರದಲ್ಲಿ ವಕೀಲ ಪಾತ್ರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಮುಂದಿನ ದಿನಗಳಲ್ಲಿ ಅವರಿಂದ ಮತ್ತಷ್ಟು ಹೊಸತನದ ಚಿತ್ರಗಳು ಮೂಡಿಬಂದು ಸಾಮಾಜಿಕ ಸಂದೇಶಗಳ ಮೂಲಕ ಜನಪ್ರಿಯವಾಗಲಿ ಎಂದರು.ಈ ವೇಳೆ ಕ್ರೇಜಿಸ್ಟಾರ್ ಅವರಿಗೆ ಬೃಹತಾಕಾರದ ಗುಲಾಬಿ ಹೂವಿನ ಹಾರ ಮೈಸೂರು ಪೇಠ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡುವ ಮೂಲಕ ಶುಭ ಕೋರಿದರು.ಈ ಸಂದರ್ಭ ರಾಜ್ಯಾಧ್ಯಕ್ಷರಾದ ಜೆ.ಕೆ ಮೋಹನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್, ಪದಾಧಿಕಾರಿಗಳಾದ ಸತೀಶ್ ಆರಾಧ್ಯ,
ಡಾ.ಶಿವಕುಮಾರ್, ಶಂಕರ್, ಚೌಡಾಚಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರವಣ್, ಸಂತೋಷ್ ದೊಡ್ಮನೆ ದಯಾನಂದ್, ಮಂಜು, ದೀಪಕ್, ಹರೀಶ್, ಮನೋಜ್, ಕೊಂಡಜ್ಜಿ ರಾಜಶೇಖರ್ ಮತ್ತಿತರರಿದ್ದರು.