ಕಾಳಮ್ಮ ಸ್ಟ್ರೀಟ್ ಬ್ರಾಹ್ಮಣ ಬೀದಿ ಅಗಲೀಕರಣಕ್ಕೆನಗರ ಶಾಸಕರಿಂದ ಪಾಲಿಕೆಗೆ ಸೂಚನೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.01: ನಗರದ ವಿವಿಧ ರಸ್ತೆಗಳ ಅಗಲೀಕರಣಕ್ಕಾಗಿ ಸರ್ವೆ ಮಾಡಿ ಯೋಜನೆ ಸಿದ್ದಪಡಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ನಗರ ಶಾಸಕ  ನಾರಾ ಭರತ್ ರೆಡ್ಡಿ ಸೂಚಿಸಿದ್ದಾರೆ.
ಈ ಕುರಿತು ಶಾಸಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದು. ಶಾಸಕರು ನಿನ್ನೆ ನಗರದಲ್ಲಿ ಬೆಂಗಳೂರು ರಸ್ತೆ, ಕಾಳಮ್ಮ ಬೀದಿ, ಬ್ರಾಹ್ಮಣ ಬೀದಿ, ತೇರು ಬೀದಿಗಳಲ್ಲಿ ಸಂಚರಿಸಿ. ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬ್ರಾಹ್ಮಣ ಬೀದಿಯ ತೇರು ನಿಲ್ಲುವ ಜಾಗದಿಂದ ಸರ್ಕಾರಿ ಬಾಲಕಿಯರ ಶಾಲೆವರೆಗೆ, ಮೋತಿ ವೃತ್ತದಿಂದ ಕಾಳಮ್ಮ ಸ್ಟ್ರೀಟ್ ನ ವಡ್ಡರ ಬಂಡೆವರೆಗೆ ರಸ್ತೆಗಳನ್ನು ಅಗಲೀಕರಣ ಮಾಡಬೇಕಿದೆ.
ಈ ಸಂಬಂಧಿಸಿ ಸರ್ವೆ ನಡೆಸಿ, ಕ್ರಿಯಾ ಯೋಜನೆ ಸಿದ್ಧಪಡಿಸಿ ಎಂದು   ಪಾಲಿಕೆಯ ಆಯುಕ್ತ ಖಲೀಲ್ ಅವರಿಗೆ  ಸೂಚನೆ ನೀಡಲಾಗಿದೆಯಂತೆ.
ನಾಲ್ಕು ರಸ್ತೆಗಳ ಅಗಲೀಕರಣಕ್ಕೆ ಸಂಬಂಧಿಸಿ ಸರ್ವೆ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕು.ಒಂದು ವಾರದಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಿ, ಒತ್ತುವರಿ ತೆರವು ಮಾಡಲು ಮಾರ್ಕಿಂಗ್ ಮಾಡುವಂತೆ ಸ್ಥಳದಲ್ಲಿ ಹಾಜರಿದ್ದ ಎಇಇ ರಾಜೇಶ್, ಜೆಇ ರಿಜ್ವಾನಾಬೇಗಂ ಅವರಿಗೆ ಸೂಚಿಸಿದ್ದಾರಂತೆ.
ಈ ವೇಳೆ ಖಾದ್ರಿಯಾ ಮಸೀದಿ ಬೀದಿ ಹಾಗೂ ಅಮಲಿ ಬಾಗ್ ಕಾಲುವೆಯನ್ನು ಸ್ವಚ್ಛಗೊಳಿಸುವಂತೆ ಸೂಚಿಸಿದ್ದಾರಂತೆ. ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯ ಎಂ.ಪ್ರಭಂಜನಕುಮಾರ್ ಮೊದಲಾದವರು ಹಾಜರಿದ್ದರು.