ಅಮರನಾಥ ಪಾಟೀಲರಿಗೆ ಮತ ನೀಡಲುವಕೀಲರಲ್ಲಿ ಸೋಮಶೇಖರರೆಡ್ಡಿ ಮನವಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.01: ನಾಡಿದ್ದು ನಡೆಯುವ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನದಲ್ಲಿ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲರಿಗೆ ತಮ್ಮ ಮೊದಲ ಪ್ರಾಶಸ್ತ್ಯ ಮತ ನೀಡುವಂತೆ ನಗರದ ವಕೀಲರಲ್ಲಿ ಇಲ್ಲಿನ ಬಳ್ಳಾರಿ ನಗರದ ಮಾಜಿ ಶಾಸಕ ಗಾಲಿ. ಸೋಮಶೇಖರ ರೆಡ್ಡಿ ಮನವಿ ಮಾಡಿದ್ದಾರೆ.
ನಗರದ ತಾಳೂರು ರಸ್ತೆಯಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿನ ವಕೀಲರ ಸಂಘಕ್ಕೆ ಭೇಟಿ ನೀಡಿದ ಸೋಮಶೇಖರ ರೆಡ್ಡಿ ಅವರು
ಈ ಹಿಂದೆ ಆಯ್ಕೆಯಾಗಿದ್ದ ಅಮರನಾಥ ಪಾಟೀಲರು.
ಸದನದಲ್ಲಿ ನಿಯಮಿತವಾಗಿ ಈ ಭಾಗದ  ಸಮಸ್ಯೆಗಳ ಬಗ್ಗೆ ವಿಶೇಷವಾಗಿ ಚರ್ಚಿಸಿ, ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.  ವಿಶೇಷವಾಗಿ ಕಲ್ಯಾಣ ಕರ್ನಾಟಕದ ಆದ್ಯತೆಯ ವಿಷಯವಾದ ಆರ್ಟಿಕಲ್ 371ಜೆ ಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆ ಹಾಗೂ ಇದರ ಅಡಿಯಲ್ಲಿ ಮೀಸಲಾತಿ, ಬಡ್ತಿ ಸೌಲಭ್ಯಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಸದನದ ಒಳಗೆ ಹಾಗೂ ಹೊರಗೆ ನಿರಂತರ ಹೋರಾಟ ನಡೆಸಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಮೂಲ ಸೌಕರ್ಯ, ನೀರಾವರಿ ಸೌಲಭ್ಯ, ಕೆ.ಎ.ಟಿ ಪೀಠ, ನಿರುದ್ಯೋಗಿ ಯುವಕರಿಗೆ ಕೌಶಲ್ಯ ಅಭಿವೃದ್ಧಿಗಾಗಿ ಅವಕಾಶಗಳ ಹೆಚ್ಚಳ, ರಸ್ತೆ ಸಂಪರ್ಕ, ರೈಲ್ವೆ ಯೋಜನೆಗಳ ಮಂಜೂರಾತಿ ಮತ್ತು ಅನುಷ್ಠಾನಗಳ ಬಗ್ಗೆಯೂ ಕೇಂದ್ರ ಸರಕಾರದ ಜೊತೆ ಸಂಪರ್ಕ ಸಾಧಿಸಿ ಸಮಾಜಮುಖಿಯಾಗಿ ಜನರ  ಆಶಯಗಳಿಗೆ ತಕ್ಕಂತೆ ಸ್ಪಂದಿಸುವ ಕೆಲಸ ಮಾಡಿದ್ದಾರೆ.  ಅದಕ್ಕಾಗಿ ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಯಾಗಿ ಮತ್ತೊಮ್ಮೆ ಕಣದಲ್ಲಿರುವ ಇವರಿಗೆ. ತಾವು  ಮೊದಲ ಪ್ರಾಶಸ್ತ್ಯದ ಮತ ನೀಡಬೇಕೆಂದು ಮನವಿ ಮಾಡಿದ್ದಾರೆ.
ಈ ವೇಳೆ ವಕೀಲರಾದ ಪಾಟೀಲ್ ಸಿದ್ದಾರೆಡ್ಡಿ, ಸಾಧನಾ ಹಿರೇಮಠ, ವಕೀಲರ ಸಂಘದ ಅಧ್ಯಕ್ಷ ಕೆ. ಎರ್ರೆಗೌಡ, ಕಾರ್ಯದರ್ಶಿ ಬಣಾಪುರದ ರವೀಂದ್ರನಾಥ ಮತ್ತು  ಪದಾಧಿಕಾರಿಗಳು ಇದ್ದರು.