ವಿಧಾನ ಪರಿಷತ್ ಚುನಾವಣೆಗೆ ಸಿದ್ದತೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.01: ಮೇ 3 ರಂದು ನಡೆಯುವ  ವಿಧಾನ ಪರಿಷತ್ತಿನ ಈಶಾನ್ಯ ಪದವಿಧರ ಕ್ಷೇತ್ರದ ಚುನಾವಣೆಯ ಮತದಾನ ಕಾರ್ಯಕ್ಕೆ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಸಕಲ ಸಿದ್ದತೆ ಮಾಡಿದೆಂದು ಜಿಲ್ಲಾ ಚುನಾವಣಾಧಿಕಾರಿ ಪ್ರಶಾತ್ ಕುಮಾರ್ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ 9298 ಮಹಿಳಾ, 4 ಜನ ಇತರೇ ಮತದಾರರು ಸೇರಿದಂತೆ  24183 ಜನ ಪದವೀಧರರು ಮತದಾನದ ಹಕ್ಕು ಪಡೆದಿದ್ದಾರೆ ಮತದಾನಕ್ಕಾಗಿ 24 ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ವಿಡಿಯೋ ಚಿತ್ರೀಕರಣ  ಮತ್ತು ವೆಬ್ ಕಾಸ್ಟ್ ವ್ಯವಸ್ಥೆ ಮಾಡಿದೆ.
ಇದೇ ಮೊದಲ ಬಾರಿಗೆ ಮತದಾರರ ಅನುಕೂಲಕ್ಕಾಗಿ ಹೋಬಳಿಮಟ್ಟದಲ್ಲೂ ಮತದಾನ ಕೇಂದ್ರ ತೆರೆದಿದೆ. ಈ ಕಾರ್ಯಕ್ಕೆ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಿದೆ.
ಮತಪತ್ರಗಳಲ್ಲಿ ಆಧ್ಯತೆಯ ಮತವನ್ನು ಅಂಕಿಗಳ ಮೂಲಕ ಮಾಡಬೇಕಿದೆ.
ಅಂದು ಬೆಳಿಗ್ಗೆ 8 ರಿಂದ ಸಂಜೆ 4 ರ ವರೆಗೆ ಮತದಾನ ನಡೆಯಲಿದ್ದು. ನಂತರ ಮತ ಪೆಟ್ಟಿಗಳನ್ನು ಕಲ್ಬುರ್ಗಿಗೆ ಎಣಿಕೆ ಕಾರ್ಯಕ್ಕೆ ಕಳಿಹಿಸಲಿದೆಂದು ತಿಳಿಸಿದ್ದಾರೆ.