ಚೇತನ್‌.ಜಿ.ಎಸ್‌ ಅವರಿಗೆ ಪಿಹೆಚ್‌ಡಿ
ಸಂಜೆವಾಣಿ ವಾರ್ತೆ
ಶಿವಮೊಗ್ಗ.ಜೂ.೧: ನಗರದ ಜೆ.ಎನ್.ಎನ್‌ ಎಂಜಿನಿಯರಿಂಗ್‌ ಕಾಲೇಜಿನ ಇನ್ಫಾರ್ಮೇಷನ್‌ ಸೈನ್ಸ್‌ ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಚೇತನ್.ಜಿ.ಎಸ್. ಅವರು ಮಂಡಿಸಿದ ‘ ಡಿಸೈನ್‌ ಆಫ್‌ ಇನೊವೇಟಿವ್‌ ಹೊಲಿಸ್ಟಿಕ್‌ ಅರ್ಕಿಟೆಕ್ಚರ್‌ ಫಾರ್‌ ಕೊಲಾಬೊರೇಟಿವ್‌ ಎಜುಕೇಷನಲ್‌ ಬಿಗ್‌ ಡೇಟಾ ಆನ್‌ ಕ್ಲೌಡ್‌ ಎನ್ವಿರಾನ್ಮೆಂಟ್‌ ‘ ವಿಷಯಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಹೆಚ್‌ಡಿ ಪದವಿ ನೀಡಿದೆ. ಮಂಡ್ಯಾದ ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ವಿನಯ್.ಎಸ್‌ ಮಾರ್ಗದರ್ಶನ ನೀಡಿದ್ದಾರೆ. ಚೇತನ್‌ ಅವರ ಸಾಧನೆಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಅಭಿನಂದನೆಯನ್ನು ಸಲ್ಲಿಸಿದೆ.