ಜಿ ಎಂ ಐ ಟಿ  ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಿಂದ ಒಟ್ಟು 643 ಆಫರ್ಸ್

ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೧; ನಗರದ  ಜಿ ಎಂ ತಾಂತ್ರಿಕ ಮಹಾವಿದ್ಯಾಲಯದ 2024 ರ ಸಾಲಿನಲ್ಲಿ ಒಟ್ಟು 643 ಆಫರ್ಸ್  ಗಳನ್ನು ವಿವಿಧ ಕಂಪನಿಗಳಲ್ಲಿ ವಿದ್ಯಾರ್ಥಿಗಳು ಪಡೆದುಕೊಂಡಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೆಲವು ಸಾಫ್ಟ್ವೇರ್ ದೈತ್ಯ ಕಂಪನಿಗಳು ಆರ್ಥಿಕ ಹಿಂಜರಿತದಿಂದ 2024 ನೇ ಸಾಲಿನ ಐಟಿ ವಿದ್ಯಾರ್ಥಿಗಳಿಗೆ  ನೇಮಕಾತಿ ನಿರ್ಬಂಧಿಸಿದ್ದವು. ಇಂತಹ ಪರಿಸ್ಥಿತಿಯಲ್ಲೂ ಇತರ ಪ್ರತಿಷ್ಠಿತ ಕಂಪನಿಗಳಾದ, ಬೋಶ್, ಇಂಟೆಲಿಪಾತ್ ಸಾಫ್ಟ್ವೇರ್, ಎಸ್ ಎಲ್ ಕೆ ಸಾಫ್ಟ್ ವೇರ್ ಸರ್ವಿಸಸ್ ಅನೊರ, ಕಿರ್ಲೊಸ್ಕರ್, ಐ ಟಿ ಸಿ ಇನ್ಫೋಟೆಕ್, ಮಹಿಂದ್ರಾ ಸಿಐಈ ಮುಂತಾದ ಹಲವು ಸಾಫ್ಟ್ ವೇರ್ ಕಂಪನಿಗಳು ಸಂದರ್ಶನ ಪ್ರಕ್ರಿಯೆ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿವೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ  ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದ್ದಾರೆ. ವಿದ್ಯಾರ್ಥಿಗಳ ತಾಂತ್ರಿಕ ಗುಣಮಟ್ಟ ಹೆಚ್ಚಿಸಲು ಅನೇಕ ತರಬೇತಿ ಸಂಸ್ಥೆಗಳ ಮತ್ತು ಕೈಗಾರಿಕೆಗಳೊಡನೆ ಒಡಂಬಡಿಕೆ ಮಾಡಿಕೊಂಡಿದ್ದು, ಇದುವರೆಗೂ 103 ಕೈಗಾರಿಕೆಗಳೊಡನೆ ಪ್ಲೇಸ್ಮೆಂಟ್, ಇಂಡಸ್ಟ್ರಿಯಲ್ ವಿಸಿಟ್ಸ್, ಇಂಟರ್ನ್ಶಿಪ್ ಮತ್ತು ಕನ್ಸಲ್ಟೆನ್ಸಿ ವರ್ಕ್ ಚಟುವಟಿಕೆಗಳಿಗೆ ಒಪ್ಪಂದವಾಗಿದ್ದು, ವಿವಿಧ ಪ್ರತಿಷ್ಠಿತ ಕಂಪನಿಗಳ 13 ಸೆಂಟರ್ ಆಫ್ ಎಕ್ಸಲೆನ್ಸ್ ಒಳಗೊಂಡಿದೆ ಎಂದು ತಿಳಿಸಿದರು.