ಕೊಂಡಜ್ಜಿ ಗ್ರಾಮದಲ್ಲಿ ಮಲೇರಿಯಾ ದಿನಾಚರಣೆ

ಸಂಜೆವಾಣಿ ವಾರ್ತೆ
ಹರಿಹರ ಮೇ 29;  ತಾಲೂಕಿನ   ಕೊಂಡಜ್ಜಿ  ಗ್ರಾಮ ಪಂಚಾಯತಿಯಲ್ಲಿ  ಮಲೇರಿಯಾ ವಿರೋಧಿ ದಿನಾಚರಣೆ ಹಾಗೂ ಅಡ್ವೊಕೇಸಿ ಸಭೆಯನ್ನು ತಾಲೂಕು ಆರೋಗ್ಯ ಇಲಾಖೆ  ಗ್ರಾಮ ಪಂಚಾಯತಿ ಹಾಗೂ ಸ್ವಸಹಾಯ ಸಂಘದ ಆಶ್ರಯದಲ್ಲಿ  ಆಚರಿಸಲಾಯಿತು.    ಈ ಕಾರ್ಯಕ್ರಮ ಕುರಿತು   ಆಡಳಿತ ವೈದ್ಯಾಧಿಕಾರಿ   ಶಶಿಕಲಾ   ಮಾತನಾಡಿ ಮಲೇರಿಯಾ ರೋಗವನ್ನು ನಿಯಂತ್ರಣ ಮಾಡಲು ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡಲ್ಲಿ ಮಲೇರಿಯಾ ನಿಯಂತ್ರಣ ಸಾಧ್ಯ. ಇದಕ್ಕೆ ಸಮುದಾಯದ ಪಾತ್ರ ಬಹು ಮುಖ್ಯ. ಲಾರ್ವಗಳ ಉತ್ಪತ್ತಿ. ಯಾವ ರೀತಿ ಆಗುತ್ತದೆ  ಲಾರ್ವ ನಾಶವನ್ನು ಗಪ್ಪಿ ಹಾಗೂ ಗ್ಯಾಂಬೂಸಿಯಾ ಮೀನುಗಳನ್ನು ಬಿಡುವುದರ ಮೂಲಕವಾಗಿ ಲಾರ್ವ ನಾಶಗಳನ್ನು ಯಾವ ರೀತಿ ಮಾಡಲಾಗುತ್ತಿದೆ ಎಂಬುದನ್ನು ಹೇಳಿದರು.ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ  ರಾಜಣ್ಣ ಮಾತನಾಡಿ ಹಿಂದೆ ಗ್ರಾಮದಲ್ಲಿ ಹೆಚ್ಚು ಹೆಚ್ಚು ಮಲೇರಿಯಾ ಪ್ರಕರಣಗಳು ಕಂಡುಬರುತ್ತಿದ್ದವು. ಆರೋಗ್ಯ ಇಲಾಖೆಯವರ ಪರಿಶ್ರಮದಿಂದ ಗ್ರಾಮಗಳು  ಮಲೇರಿಯಾ ಮುಕ್ತವಾಗಿದೆ. ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಬೇರೆ ಬೇರೆ ಜಿಲ್ಲೆಗಳಿಗೆ ಇಟ್ಟಿಗೆಯನ್ನು ಮಾಡಲು ಜನರು ಬರುತ್ತಾರೆ. ಆದುದರಿಂದ ಜ್ವರದ  ಪ್ರಕರಣಗಳು ಇರಬಹುದು. ಮಲೇರಿಯಾ ಜ್ವರ ಹೊಂದಿದ ವ್ಯಕ್ತಿಯು ಇದ್ದಲ್ಲಿ. ಅಂತಹ ವ್ಯಕ್ತಿಯನ್ನು ಅನಾಪೇಲಿಸ್ ಸೊಳ್ಳೆ ಕಚ್ಚಿದರೆ ಅವರಿಗೆ ಮಲೇರಿಯಾ ಜ್ವರ ಬರುತ್ತದೆ. ಮುಂಜಾಗ್ರತಾ ಕ್ರಮಗಳನ್ನು  ತೆಗೆದುಕೊಳ್ಳುವ ಬಗ್ಗೆ ಹೇಳಿದರು.   ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಮಾತನಾಡಿ ಮಳೆಗಾಲ ಪ್ರಾರಂಭವಾಗಿರುವುದರಿಂದ ನೀರಿನ ಸಂಗ್ರಹ ಮನೆ ಹಿಂದೆ ಮುಂದೆ ಮತ್ತು ಘನ ತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹಣೆ ಆಗುತ್ತದೆ. ಆದುದರಿಂದ  ಸಂಗ್ರಹವಾದ ಗುಂಡಿಯ ನೀರನ್ನು ಸರಾಗವಾಗಿ ಹರಿಯುವಂತೆ. ಮತ್ತು ಘನ ತ್ಯಾಜ್ಯ   ವಸ್ತುಗಳನ್ನು ವಿಲೇವಾರಿ ಮಾಡಿ ಹಾಗೂ ಸಂಗ್ರಹಿಸಿದ ನೀರನ್ನು ಮುಚ್ಚಿ ಬೆಳೆಸಿ  ಇದರಿಂದ ಮಲೇರಿಯಾ  ಹಾಗೂ ಡೆಂಗ್ಯೂ ಸೊಳ್ಳೆಗಳ ಉತ್ಪತ್ತಿತಾಣಗಳನ್ನು ನಿಯಂತ್ರಣ ಮಾಡಬಹುದು. ಇದರ ರೋಗಲಕ್ಷಣಗಳು ಸಾಮಾನ್ಯವಾಗಿ ಸೋಂಕಿತ ಸೊಳ್ಳೆಯಿಂದ ಕಚ್ಚಿದ ನಂತರ ಕೆಲವೇ ವಾರಗಳಲ್ಲಿ ಪ್ರಾರಂಭವಾಗುತ್ತವೆ. ಈ ರೋಗದ ಲಕ್ಷಣಗಳು ಚಳಿ ಜ್ವರ.ಅಸ್ವಸ್ಥತೆಯ.ತಲೆನೋವು.ವಾಕರಿಕೆ ಮತ್ತು ವಾಂತಿ.ಅತಿಸಾರ.ಹೊಟ್ಟೆ ನೋವು.ಕೆಮ್ಮು. ಇತ್ಯಾದಿ ಲಕ್ಷಣಗಳನ್ನು ಹೊಂದಿರುತ್ತಾರೆ.ಆದುದರಿಂದ ಯಾವುದೇ ಜ್ವರ ಬರಲಿ ರಕ್ತ ಪರೀಕ್ಷೆ ಮಾಡಿಸಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿಗಳದ ಅಂಜಿನಪ್ಪ  ಆರೋಗ್ಯನಿರೀಕ್ಷಣಾಧಿಕಾರಿಯಾದ ರಂಗನಾಥ್. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ. ಪ್ರತಿಭಾ.ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ತಿಪ್ಪೇಸ್ವಾಮಿ    ಕಸ್ತೂರಮ್ಮ   .ಸಮುದಾಯ ಆರೋಗ್ಯ ಅಧಿಕಾರಿಗಳು  ಹಾಗೂ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು