ದಕ್ಷಿಣ ಶಿಕ್ಷಕರ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿಗೆ ಮತ ನೀಡಿ
ಸಂಜೆವಾಣಿ ವಾರ್ತೆ
ಹನೂರು ಜೂ 1 :- ಕರ್ನಾಟಕ ವಿಧಾನ ಪರಿಷತ್ ಚುನಾವಣೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿಯಾಗಿರುವ ಕೆ.ವಿವೇಕಾನಂದ ರವರ ಪರ ಮಾಜಿ ಸಚಿವ ಎನ್ ಮಹೇಶ್ ಹಾಗೂ ಶಾಸಕ ಮಂಜುನಾಥ್ ಮತ ಯಾಚನೆ ಮಾಡಿದರು.
ಪಟ್ಟಣದ ನಾನಾ ಕಾಲೇಜುಗಳಿಗೆ ಭೇಟಿ ನೀಡಿ ಬಳಿಕ ಮಾತನಾಡಿದ ಶಾಸಕ ಎಂಆರ್ ಮಂಜುನಾಥ್ ಅವರು ಕಾಲೇಜಿನ ಅಧ್ಯಾಪಕರು ಹಾಗೂ ಶಿಕ್ಷಕರಲ್ಲಿ ಬಿಜೆಪಿ ಜೆಡಿಎಸ್ ಅಭ್ಯರ್ಥಿ ವಿವೇಕಾನಂದ ಅವರಿಗೆ ಮೊದಲ ಪ್ರಾಶಸ್ತ್ರ್ಯ ಮತ ನೀಡುವ ಮೂಲಕ ಹೆಚ್ಚಿನ ಮತಗಳಿಂದ ಜಯಗಳಿಸಿಕೊಡಬೇಕೆಂದು ಮನವಿ ಮಾಡಿದರು.
ಮಾಜಿ ಸಚಿವ ಎನ್ ಮಹೇಶ್ ವಿವೇಕಾನಂದ ರವರು ಶಿಕ್ಷಕರ ಕುಂದುಕೊರತೆಗಳನ್ನ ಆಲಿಸಿ ಮಹತ್ತರವಾದ ಬದಲಾವಣೆ ತರಲು ಶಿಕ್ಷಕರ ಪ್ರತಿನಿಧಿಯಾಗಿ ಸರ್ಕಾರದ ಮಟ್ಟದಲ್ಲಿ ಧ್ವನಿಯೆತ್ತಲು ಸೂಕ್ತವಾದ ವ್ಯಕ್ತಿ, ಸರ್ಕಾರದಿಂದ ಶಿಕ್ಷಕರಿಗೆ ಸಿಗಬೇಕಾದ ಮಾನ್ಯತೆಗಳು ಬೇಡಿಕೆಗಳನ್ನ ನಿವಾರಿಸುವಲ್ಲಿ ದುಡಿಯುತ್ತಾರೆ ಈಗಾಗಲೇ ಚಾಮರಾಜನಗರ ಜಿಲ್ಲೆಯ ಹಲವಾರು ಶಾಲಾ ಕಾಲೇಜು ಶಿಕ್ಷಕರ ಒಕ್ಕೂಟ ಸಂಘಗಳ ಬೆಂಬಲ ವ್ಯಕ್ತಪಡಿಸುತ್ತಿದ್ದು, ಶಿಕ್ಷಕರ ಬಳಿ ಮತಯಾಚನೆಗೆ ತೆರಳಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ಈ ಸಂದರ್ಭಗಳಲ್ಲಿ ಚಾಮುಲ್ ನಿರ್ದೇಶಕರಾದ ಉದ್ದನೂರು ಪ್ರಸಾದ್ ಬಿಜೆಪಿ ಮುಖಂಡರಾದ ಎಸ್ ದತ್ತೇಶ್ ಕುಮಾರ್, ವೆಂಕಟೇಗೌಡ ಶ್ರೀನಿವಾಸ್, ಮಂಜು ಹಾಗೂ ಶರ್ಮಾ ಸೇರಿದಂತೆ ಹಲವರು ಹಾಜರಿದ್ದರು