ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ
ಸೇಡಂ,ಜೂ, 01: ತಾಲೂಕಿನ ವಿಮಾಡಾಪುರ ಸ.ಹಿ.ಪ್ರಾ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾರುತಿ ಹುಜರಾತಿ ಅವರು ಶಾಲಾ ಪ್ರಾರಂಭೋತ್ಸವ ಅಂಗವಾಗಿ ಶಾಲೆಗೆ ಭೇಟಿ ನೀಡಿದ ಅವರು 1 ನೇ ತರಗತಿಯ ಹಾಗೂ ಆಂಗ್ಲ ಮಾಧ್ಯಮಕ್ಕೆ ದಾಖಲಾದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಪಾಟಿಗಳನ್ನು ವಿತರಿಸಿದರು.ಈ ವೇಳೆಯಲ್ಲಿ ಬಿ ಆರ್ ಪಿ ಗಳಾದ ಶಿವಲಿಂಗಪ್ಪ ದೊಡ್ಮನಿ, ಉಮಾಕಾಂತ್ ರಾಂಪುರ, ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ರಾಜಶೇಖರ್ ಮುಖ್ಯ ಗುರುಗಳಾದ ಲಚ್ಯ್ನಾ ನಾಯಕ್ ಮತ್ತು ಶಿಕ್ಷಕರಾದ ಶ್ರೀ ಶರಣಬಸಪ್ಪ, ಶ್ರೀಮತಿ ಮಹಾ ದೇವಿ, ಪ್ರಭಾವತಿ, ಖುತೇಜ, ಪದ್ಮಾ ಶಹನಾಜ್ ಬೇಗಂ ಇದ್ದರು.