ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ:ಮತಗಟ್ಟೆ ಮಾಹಿತಿ ಪಡೆಯಲು ಜಿಲ್ಲೆಯಾದ್ಯಂತ ಸಹಾಯವಾಣಿ ಕೇಂದ್ರ ಸ್ಥಾಪನೆ
ಕಲಬುರಗಿ:ಮೇ.31: ಈಶಾನ್ಯ ಕರ್ನಾಟಕ ಪದವೀಧರರ ಕ್ಷೇತ್ರ ಚುನಾವಣೆ-2024 ಹಿನ್ನೆಲೆಯಲ್ಲಿ ಇದೇ ಜೂನ್ 3 ರಂದು ಮತದಾನ ನಡೆಯಲಿದ್ದು, ಮತದಾನ ಪ್ರಕ್ರಿಯೆ, ಮತಗಟ್ಟೆ ಸಂಖ್ಯೆ, ಮತದಾರರ ಪಟ್ಟಿಯಲ್ಲಿ ಹೆಸರಿರುವ ಕುರಿತು ಪರಿಶೀಲಿಸಲು ಮತದಾರರು ಹತ್ತಿರದ ಸಂಬಂಧಪಟ್ಟ ತಹಸಿಲ್ದಾರ ಕಚೇರಿ ಹಾಗೂ ಕಲಬುರಗಿ ನಗರ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲು ಜಿಲ್ಲೆಯಾದ್ಯಂಥ ಸಹಾಯವಾಣಿ ಕೇಂದ್ರ ಸ್ಥಾಪಿಸಿದ್ದು, ಮತದಾರರು ಇದರ ಲಾಭ ಪಡೆಯಬೇಕೆಂದು ಈಶಾನ್ಯ ಪದವೀಧರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.
ಮತದಾರರು ಜಿಲ್ಲಾ-ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾದ ಮತದಾರರ ಸಹಾಯವಾಣಿ ಕೇಂದ್ರಗಳಿಗೆ (Voter Facilitation Centre) ದೂರವಾಣಿಗೆ ಕರೆ ಮಾಡಿಯೂ ಸಹ ಮತದಾನ ಮಾಡಬೇಕಾದ ಮತಗಟ್ಟೆ ಸಂಖ್ಯೆ ಹಾಗೂ ಮತದಾರರ ಕ್ರಮ ಸಂಖ್ಯೆಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಕಲಬುರಗಿ ಜಿಲ್ಲೆಗೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು, ಸಹಾಯವಾಣಿ ಸಂಖ್ಯೆ 1950 ಗೆ ಕರೆ ಮಾಡಬಹುದಾಗಿದೆ.
ತಾಲೂಕುವಾರು ತಹಶೀಲ್ದಾರ ಕಚೇರಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿ ಸಂಖ್ಯೆ: ಅಫಜಲಪೂರ 08470-282020, ಆಳಂದ 08477-202428, ಚಿಂಚೋಳಿ 08475-200127, ಚಿತ್ತಾಪೂರ-08474-236250, ಶಹಾಬಾದ್ 08474-200145, ಕಲಬುರಗಿ ನಗರಕ್ಕೆ ಸಂಬಂಧಿಸಿದಂತೆ ಕಲಬುರಗಿ ಮಹಾನಗರ ಪಾಲಿಕೆ 08472-241364, ಕಲಬುರಗಿ ಗ್ರಾಮೀಣಕ್ಕೆ ಸಂಬಂಧಿಸಿದಂತೆ ಕಲಬುರಗಿ 08472-278636, ಕಮಲಾಪೂರ 08478-200144, ಜೇವರ್ಗಿ 08442-236025, ಯಡ್ರಾಮಿ-8310770063, ಸೇಡಂ 08441-276184 ಹಾಗೂ ಕಾಳಗಿ-7483334202.