ಜೂ 4 ರಂದು19 ಸುತ್ತುಗಳಲ್ಲಿ ಎಂಪಿ ಮತಗಳ ಎಣಿಕೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.31: ಕಳೆದ ತಿಂಗಳ 17 ರಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಯ ಮತಗಳ ಎಣಿಕೆ ಜೂನ್  4 ರಂದು ನಗರದ ವೈ. ಮಹಾಬಲೇಶ್ವರಪ್ಪ ಇಂಜಿನೀಯರಿಂಗ್ ಕಾಲೇಜಿನಲ್ಲಿ ಬೆಳಿಗ್ಗೆ 8 ರಿಂದ ಮತಗಳ ಎಣಿಕೆ ಮಾಡಲಿದ್ದು  19 ಸುತ್ತಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಹೇಳಿದ್ದಾರೆ.
ಮೊದಲು ಅಂಚೆ ಮತ ಎಣಿಸಲಿದೆ. ನಂತರ 8.30 ರಿಂದ ಮತಯಂತ್ರಗಳಲ್ಲಿನ ಮತ ಎಣಿಕೆ ನಡೆಯಲಿದೆ. ಇದಕ್ಕಾಗಿ ಎಂಟು ಕೋಣೆಗಳಲ್ಲಿ ವ್ಯವಸ್ಥೆ ಮಾಡಿದೆ.
ಅವುಗಳಲ್ಲಿ 14 ಟೇಬಲ್ ಗಳಿರಲಿವೆ. ಒಂದು ಸುತ್ತಿಗೆ 14 ಮತಯಂತ್ರಗಳ ಎಣಿಕೆ ನಡೆಯಲಿದೆಂದು ತಿಳಿಸಿದರು
ಎಣಿಕೆ ಕಾರ್ಯಕ್ಕೆ 463 ಸಿಬ್ಬಂದಿ ನೇಮಕ ಮಾಡಿ ಅವರಿಗೆ ಎರೆಡು ಬಾರಿ ತರಬೇತಿ ನೀಡಿದೆ.  ಮತಗಳ ಎಣಿಕೆ ಕಾರ್ಯ ಬಹುತೇಖ ಮದ್ಯಾಹ್ನದ ವೇಳೆಗೆ ಲಭ್ಯವಾಗಲಿದೆಂದು ಹೇಳಿದರು.
ಅಂದು 144 ಜಾರಿ ಇರಲಿದೆ.‌ಮದ್ಯ ಮರಾಟ ಜಾರಿ ಇರಲಿದೆ.
ಎಎಸ್ಪಿ ರವಿಕುಮಾರ್ ಅವರು ಭದ್ರತೆಗೆ ಐದು ಡಿವೈಎಸ್ಪಿ, 15 ಸಿಪಿಐ, 25 ಪಿಎಸ್ ಐ, 40 ಎಎಸ್ ಐ, 400 ಪೊಲೀಸ್ ಪೇದೆ, 4 ಕೆಸ್ ಆರ್ ಪಿ, 4 ಡಿಎಆರ್ ತುಕಡಿಗಳನ್ನು ನೇಮಕ ಮಾಡಿದೆಂದು ತಿಳಿಸಿದರು