ಕ್ಷೇತ್ರದ ಅಭಿವೃದ್ಧಿಗಾಗಿಪ್ರತಾಪ್ ರೆಡ್ಡಿಗೆ ಮತ ನೀಡಲು ಮನವಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.31:  ಮಹಾನಗರದ ವ್ಯಾಪ್ತಿಯಲ್ಲಿ  ಆರು ವರ್ಷಗಳ ಅವಧಿಗೆ ನಡೆಯಲಿರುವ ವಿಧಾನ ಪರಿಷತ್ತಿನ ಈಶಾನ್ತ  ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ‌ಮಾಡಿರುವ ಸ್ವತಂತ್ರ ಅಭ್ಯರ್ಥಿ ನಾರಾ ಪ್ರತಾಪ್ ರೆಡ್ಡಿ ಅವರಿಗೆ ಮೊದಲ ಪ್ರಾಶಸ್ತ್ಯ ಮತ ನೀಡುವಂತೆ ಇಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷ ಜೆ ವಿ. ಮಂಜುನಾಥ,  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ  ಜಿಲ್ಲಾ ಅಧ್ಯಕ್ಷ ನಿಷ್ಠಿರುದ್ರಪ್ಪ,  ಕೊರ್ಲಗುಂದಿ ವಿ. ದೊಡ್ಡಕೇಶವರೆಡ್ಡಿ, ಕರ್ನಾಟಕ ಕ್ರಿಯಾಶೀಲ ಪದವೀಧರರ ವೇದಿಕೆಯ ಬಳ್ಳಾರಿ ಜಿಲ್ಲಾ ಕಾರ್ಯಾಧ್ಯಕ್ಷ ಲಕ್ಷ್ಮಣ ಎಸ್ ಭಂಡಾರಿ, ಹಾಗೂ ಪಕ್ಷದ ಸಕ್ರಿಯ ಕಾರ್ಯಕರ್ತರುಗಳಾದ ನಾಗರಾಜ್ ಗೌಡ, ಮಲ್ಲಿಕಾರ್ಜುನ ಹರಿವಾಣ್, ಸುರೇಶ್ ನಾಯಕ್, ಲೋಕೇಶ್, ಭರತ್ ಯಾದವ್, ವಿಜಯ್ ಕುಮಾರ್ ಮುಂತಾದವರು  ಮತಯಾಚನೆ ಮಾಡಿದರು.
ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ, ಹಾಗೂ ನಮ್ಮ ಬಳ್ಳಾರಿಯ ಸ್ಥಳೀಯರೇ ಆದಂತಹ ಎನ್ ಪ್ರತಾಪ್ ರೆಡ್ಡಿ ಅವರು ಈ ಕ್ಷೇತ್ರದಿಂದ ಜಯಶೀಲರಾಗಿ ವಿಧಾನಪರಿಷತ್ತಿನಲ್ಲಿ ಎಲ್ಲರ ಧ್ವನಿಯಾಗಿ ಸೇವೆ ಸಲ್ಲಿಸಲು, ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲು ತಾವುಗಳು ಈ ಬಾರಿ ಅವಕಾಶ ಮಾಡಿಕೊಡಲೇಬೇಕೆಂದರು.
ಈ ಸಂದರ್ಭದಲ್ಲಿ ಮತದಾರರು  ಹಾಗೂ ಶಿಕ್ಷಕರಾದ  ರಾಜಶೇಖರ್, ಮೃತ್ಯುಂಜಯ ಸ್ವಾಮಿ, ಬಸವರಾಜ್ ,ಛಾಯಾ, ಇಂದಿರಾ,ದುರ್ಗಮ್ಮ, ಸುಜಾತ ಮತ್ತು ನಗರದ ಅನೇಕ ಮತದಾರರನ್ನು ಭೇಟಿಯಾಗಿ ಮತಯಾಚಿಸಲಾಯಿತು.