ಸರ್ಕಾರಿ ದಂತ ಕಾಲೇಜಿನಲ್ಲಿ  ವಿಶ್ವ ತಂಬಾಕು ರಹಿತ ದಿನಾಚರಣೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.31: ನಗರದ ವಿಮ್ಸ್ ನ ದಂತ ಕಾಲೇಜಿನಲ್ಲಿ ಇಂದು ವಿಶ್ವ ತಂಬಾಕು ದಿನಾಚರಣೆ ಆಚರಿಸಲಾಯ್ತು.
ಕಾಲೇಜಿನ ಮುಂಭಾಗದಲ್ಲಿ ಸೇರಿದ ವಿಮ್ಸ್ ನ ಪ್ರಬಾರಿ ನಿರ್ದೇಶಕ ಡಾ.ಕೃಷ್ಣ  ಅವರು ಜಾಥಾಗೆ ಚಾಲನೆ ನೀಡಿದರು.
ಜಾಥವು ಕಾಲೇಜಿನಿಂದ ಮೇರಿ ಮಾತಾ ಚರ್ಚ್ ವಾಸವಿ ಸ್ಕೂಲ್, ಇನ್ ಪ್ಯಾಂಟ್ರಿ ರಸ್ತೆ, ಸುಧಾ ಸರ್ಕಲ್ ಮೂಲಕ ವಿಮ್ಸ್ ನಿರ್ದೇಶಕರ ಕಚೇರಿ  ಬಳಿ ಬಂದು ವಿರಮಿಸಲಾಯ್ತು.
ಜಾಥಾದಲ್ಲಿ ಸಿಗರೇಟ್  ಸೇವನೆ ಆರೋಗ್ಯಕ್ಕೆ ವೇದನೆ, ತಂಬಾಕು ಸಾಕು ಜೀವನ ಬೇಕು ಮೊದಲಾದ ಘೋಷಣೆಗಳನ್ನು ಕೂಗುತ್ತ ಜನರ ಗಮನ ಸೆಳೆಯಲಾಯ್ತು.‌
ತಂಬಾಕು ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ಹಿರಿಯ ವೈದ್ಯರು ತಿಳಿಸಿದರು.‌
ಕಾಲೇಜಿನ ಪ್ರಾಂಶುಪಾಲರಾದ ಡಾ.ಭಾರತಿ ಎಸ್.ಹೆಚ್. ವೈದ್ಯರುಗಳಾದ ಡಾ.ಮಧುಸೂಧನರೆಡ್ಡಿ, ಡಾ.ಪೂರ್ಣಿಮ, ಡಾ.ಉದಯರೆಡ್ಡಿ, ಡಾ.ರಚನಾ, ಡಾ.ವೀರರೆಡ್ಡಿ, ಡಾ.ಮಂಜುನಾಥ ಸ್ನಾತಕೋತ್ತರ  ಮತ್ತು ಪದವಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.