ಕೃತಕ ಬುದ್ಧಿಮತ್ತೆ ಕುರಿತು ಕಾರ್ಯಾಗಾರ
ಕಲಬುರಗಿ,ಮೇ.31-ಕೃತಕ ಬುದ್ಧಿಮತ್ತೆ (ಎ-1) ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎನ್ನುವುದು ಕಂಪ್ಯೂಟರ್‍ಗಳು ವಿವಿಧ ಸುಧಾರಿತ ಕಾರ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡುವ ತಂತ್ರಜ್ಞಾನಗಳ ಗುಂಪಾಗಿದ್ದು, ಮಾತನಾಡುವ ಮತ್ತು ಲಿಖಿತ ಭಾಷೆಯನ್ನು ನೋಡುವ, ಅರ್ಥಮಾಡಿಕೊಳ್ಳುವ ಮತ್ತು ಭಾಷಾಂತರಿಸುವ ಸಾಮಥ್ರ್ಯ, ಡೇಟಾವನ್ನು ವಿಶ್ಲೇಷಿಸುವುದು, ಶಿಫಾರಸುಗಳನ್ನು ಮಾಡುವುದು ಮತ್ತು ಹೆಚ್ಚಿನವು
ಮುಖ ಗುರುತಿಸುವಿಕೆ, ಹೆಚ್ಚಿನ ಜನರು ತಮ್ಮ ಅಂಡ್ರಾಯ್ಡ್ ಅಥವಾ ಐಫೋನ್‍ನಲ್ಲಿ ಮುಖ ಗುರುತಿಸುವಿಕೆ ವೈಶಿಷ್ಟ್ಯವನ್ನು ಬಳಸುತ್ತಾರೆ ಏಕೆಂದರೆ ಇದು ನಿಮ್ಮ ಸಾಧನದಲ್ಲಿ ಲಭ್ಯವಿರುವ ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಸ್ಮಾರ್ಟ್ ಕಾರುಗಳು, ಡಿಜಿಟಲ್ ಸಹಾಯಕರು, ಮನರಂಜನೆ ಮತ್ತು ಸಾಮಾಜಿಕ ಅಪ್ಲಿಕೇಶನ್‍ಗಳು, ಬ್ಯಾಂಕಿಂಗ್ ಗೂಗಲ್ ಪ್ರಿಡಿಕ್ಟಿವ್ ಸರ್ಚ್ ಅಲ್ಗಾರಿದಮ್ ಮುಂತಾದವುಗಳು ಕೃತಕ ಬುದ್ಧಿಮತ್ತೆಯ ಉಪಯೋಗಗಳಾಗಿವೆ ಎಂದು ಹೈದರಾಬಾದಿನ ಏ ಐ ಎಂಟಪ್ರ್ರೈಸ್ ಆರ್ಕಿಟೆಕ್ಟ್ ನ ಸಿಓಇ ಮತ್ತು ನಿರ್ದೇಶಕ ಇಂಜಿನಿಯರ್ ಜುಬೇರ್ ಶೇಖ್ ಹೇಳಿದರು.
ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ವಿಭಾಗದಿಂದ ಐಎಸ್‍ಟಿಇ ಮತ್ತು ಐಇಟಿಇ ಸಂಸ್ಥೆಯ ಸಯೋಗತ್ವದಲ್ಲಿ ಆಯೋಜಿಸಲಾಗಿದ್ದ ಯಶಂಶಿಯಲ್ಸ್ ಅಂಡ್ ಎಮಜಿರ್ಂಗ್ ಟ್ರೆಂಡ್ಸ್ ಆಫ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಡಾಟಾ ಸೈನ್ಸ್ ಫಾರ್ ಇಂಜಿನಿಯರ್ಸ್ ಎಂಬ ವಿಷಯದ ಕುರಿತ ಒಂದು ವಾರದ ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಆಧುನಿಕ ಜಗತ್ತಿಗೆ ಬೇಕಾಗುವಂತಹ ಕೃತಕ ಬುದ್ಧಿಮತ್ತೆ ಎಂತಹ ತಂತ್ರಜ್ಞಾನದ ಕುರಿತ ಯಾವುದೇ ಕಾರ್ಯಕ್ರಮಗಳಿದ್ದರೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಾ ಬೆಂಬಲ ನೀಡುತ್ತದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ ಪಿಡಿಎ ಇಂಜಿನಿಯರಿಂಗ್ ಕಾಲೇಜು ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ವಿಭಾಗ ವಿಭಾಗದ ಎಲ್ಲ ಪ್ರಾಧ್ಯಾಪಕರುಗಳಿಗೆ ಅಭಿನಂದನೆ. ಈ ಕಾರ್ಯಕ್ರಮದ ಸದುಪಯೋಗವನ್ನು ಕಾಲೇಜಿನ ಎಲ್ಲಾ ಪ್ರಾಧ್ಯಾಪಕರುಗಳು ಪಡೆದುಕೊಳ್ಳಬೇಕೆಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜಾ ಭೀಮಳ್ಳಿಯವರು ನುಡಿದರು. ಕಾಲೇಜಿನ ಪ್ರಾಚಾರ್ಯರಾದ ಡಾ.ಶಶಿಕಾಂತ್ ಆರ್. ಮೀಸೆ, ಉಪ ಪ್ರಾಚಾರ್ಯ ಆಡಳಿತ ಡಾ.ಶ್ರೀದೇವಿ ಸೋಮ, ಉಪಪ್ರಚಾರ್ಯರಾದ ಡಾ. ಎಸ್.ಆರ್. ಹೊಟ್ಟಿ ಉಪಸ್ಥಿತರಿದ್ದರು. ಸಂಚಾಲಕ ಮತ್ತು ಎಲೆಕ್ಟ್ರಾನಿಕ್ಸ್ ಅಂಡ್ ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪೆÇ್ರ. ಸಂಜಯ್ ಮಾಕಲವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಂಯೋಜಕರಾದ ಡಾ. ಸಂದೀಪ್ ಕುಲಕರ್ಣಿ ಅವರು ಕಾರ್ಯಕ್ರಮದ ಕುರಿತ ಪಕ್ಷ ನೋಟವನ್ನು ಕೊಟ್ಟರು. ಪೆÇ್ರ.ರಫಿಯಾ ಕೆ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಸಂಯೋಜಕರಾದ ಪೆÇ್ರ.ಮೀನಾಕ್ಷಿ ಪಾಟೀಲ್ ನಿರೂಪಿಸಿದರು. ಜಿಲ್ಲೆಯ ವಿವಿಧ ಕಾಲೇಜುಗಳಿಂದ ಸುಮಾರು 80 ಜನರು ಈ ಕಾರ್ಯಗಾರದಲ್ಲಿ ನೊಂದಣಿ ಮಾಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಡಾ.ಕಲ್ಪನಾ ವಂಜರ ಕಡೆ ,ಡಾ. ಚನ್ನಪ್ಪ ಭೈರಿ ಪೆÇ್ರ. ಪಾರ್ವತಿ ಕಣಕಿ, ಆನಂದ ಹೊಸಮನಿ, ಕಾಶಯ್ಯ ಧರ್ಮರಾಜ್ ಮಲ್ಕಪುಗೋಳ, ಚಂದ್ರಕಾಂತ್, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಡಿಎನ್ ಗಳು ಪ್ರಾಧ್ಯಾಪಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.