ಮನೆ ಬೀಗ ಮುರಿದು 2.83 ಲಕ್ಷ ಮೌಲ್ಯದ ನಗನಾಣ್ಯ ಕಳವು
ಕಲಬುರಗಿ,ಮೇ.31-ಮನೆ ಬೀಗ ಮುರಿದು 2.83 ಲಕ್ಷ ರೂ.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಿರುವ ಘಟನೆ ಇಲ್ಲಿನ ವೀರೇಂದ್ರ ಪಾಟೀಲ ಬಡಾವಣೆಯಲ್ಲಿ ನಡೆದಿದೆ.
ಅಮರೇಶ ಪಾಟೀಲ ಎಂಬುವವರ ಮನೆ ಬೀಗ ಮುರಿದು 2 ಲಕ್ಷ ರೂ.ಮೌಲ್ಯದ 50 ಗ್ರಾಂ.ಬಂಗಾರದ ತಾಳಿ ಚೈನ್, 30 ಸಾವಿರ ರೂ.ಮೌಲ್ಯದ 6 ಗ್ರಾಂ.ಬಂಗಾರದ ಸುತ್ತುಂಗರ, 25 ಸಾವಿರ ರೂ.ಮೌಲ್ಯದ ಕಿವಿಯೋಲೆ, 10 ಸಾವಿರ ರೂ.ಮೌಲ್ಯದ 2 ಗ್ರಾಂ.ರಿಂಗ್, 1 ಸಾವಿರ ರೂ.ಮೌಲ್ಯದ ಬೆಳ್ಳಿ ಮೂರ್ತಿ, 600 ರೂ.ಮೌಲ್ಯದ 10 ಗ್ರಾಂ.ಬೆಳ್ಳಿ ಗ್ಲಾಸ್ ಮತ್ತು ಚಮಚಾ, 17 ಸಾವಿರ ರೂ.ನಗದು ಸೇರಿ 2.65 ಲಕ್ಷ ರೂ.ಮೌಲ್ಯದ 60 ಗ್ರಾಂ.ಬಂಗಾರ, 1600 ರೂ.ಮೌಲ್ಯದ 30 ಗ್ರಾಂ.ಬೆಳ್ಳಿ ಸಾಮಾನು, 17 ಸಾವಿರ ರೂ.ನಗದು ಸೇರಿ 2,83,600 ರೂ.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಲಾಗಿದೆ.
Àಮುಂಬೈಯಲ್ಲಿರುವ ಅಳಿಯ ಶಿವಕುಮಾರ ಪಾಟೀಲ ಅವರು ಅನಾರೋಗ್ಯಕ್ಕಿಡಾದ ಹಿನ್ನೆಲೆಯಲ್ಲಿ ಅವರ ಆರೋಗ್ಯ ವಿಚಾರಿಸಲೆಂದು ಅಮರೇಶ ಪಾಟೀಲ ಅವರು ಕುಟುಂಬ ಸಮೇತ ಮುಂಬೈಗೆ ಹೋದ ವೇಳೆ ಕಳ್ಳರು ಮನೆ ಬೀಗ ಮುರಿದು ನಗನಾಣ್ಯ ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.