ಝಾಪುರ: ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ವಿತರಣೆ
ಕಲಬುರಗಿ,ಮೇ.31-ತಾಲ್ಲೂಕಿನ ಝಾಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು 1 ರಿಂದ 5 ತರಗತಿ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣೆ ಸಮಾರಂಭ ಜರುಗಿತು.
ಶಿಕ್ಷಣ ಸಂಯೋಜಕ ಶಿವಮೂರ್ತೆಪ್ಪ ಮಡಿವಾಳ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಕಾಂತ, ಎಸ್.ಡಿ.ಎಂ.ಸಿ.ಅಧ್ಯಕ್ಷ ಸುರೇಶ ಮಾಂಗ್, ಶಾಲಾ ಮುಖ್ಯಗುರು ದೇವಿಂದ್ರಪ್ಪ ಗಣಮುಖಿ, ಸಹ ಶಿಕ್ಷಕರಾದ ಶಾಂತಾಬಾಯಿ ಹಿರೇಮಠ, ಶಾರದಾ ಲಂಡನಕರ್, ಈರವ್ವ ಹಿರೆಕೆನ್ನೂರ, ಗ್ರಾಮ ಪಂಚಾಯತಿ ಸದಸ್ಯ ಪೀರಪ್ಪ ದೊಡ್ಡಮನಿ ಉಪಸ್ಥಿತರಿದ್ದರು.