ಕಳ್ಳನ ಬಂಧನ: 3.30 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
ಯಡ್ರಾಮಿ,ಮೇ.31-ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸಿರುವ ಯಡ್ರಾಮಿ ಪೊಲೀಸರು 3.30 ಲಕ್ಷ ರೂ.ಮೌಲ್ಯದ 55 ಗ್ರಾಂ.ಬಂಗಾರದ ಆಭರಣ ಮತ್ತು 1500 ರೂ.ನಗದು ಜಪ್ತಿ ಮಾಡಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಲಬುರಗಿ ನಗರದ ಶಾ ಜಿಲಾನಿ ದರ್ಗಾ ಏರಿಯಾ ನಿವಾಸಿ ಮೊಹಮದ್ ರಫಿಕ್ ಅಲಿಯಾಸ್ ರಫಿಕ್ ತಂದೆ ಅಬ್ದುಲ್ ಘನಿ ಇನಾಮದಾರ ಎಂಬಾತನನ್ನೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪಿಎಸ್‍ಐ ವಿಶ್ವನಾಥ ರೆಡ್ಡಿ ಮತ್ತು ಸಿಬ್ಬಂದಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಯಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಯಡ್ರಾಮಿ ಪಟ್ಟಣದಲ್ಲಿ ಮನೆ ಕಳ್ಳತನ ಪ್ರಕರಣಗಳು ನಡೆಯುತ್ತಲಿದ್ದವು. ಕಳ್ಳರ ಕಾಟದಿಂದ ಕಾಟದಿಂದ ಜನ ಮನೆಬಿಟ್ಟು ಹೊರ ಹೋಗುಲು ಹೆದರುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಕಳ್ಳನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದರಿಂದ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.