ಸಿಡಿಲು ಬಡಿದು ಮೃತ ಪಟ್ಟವರ ಮನೆಗೆ ಮಾಜಿ ಶಾಸಕ ತೇಲ್ಕೂರ್ ಭೇಟಿ
ಸೇಡಂ,ಮೇ,31: ತಾಲೂಕಿನ ವೆಂಕಟಾಪುರ ತಾಂಡಾದಲ್ಲಿ ಕಳೆದ ವಾರ ಸಿಡಿಲು ಬಡೆದು ಮೋಹನ ತಂದೆ ದೇವಜಾ ನಾಯಕ ಹಾಗೂ ಅವರ ಎರಡು ಎತ್ತುಗಳು ಮೃತ ಪಟ್ಟಿದ್ದರು. ವಿಷಯ ತಿಳಿಯುತ್ತಿದ್ದಂತೆ ಮಾಜಿ ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ ಅವರು ಮೃತನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸ್ಥಳದಲ್ಲಿಯೇ ತಹಶಿಲ್ದಾರರಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಶಿಘ್ರ ಸರಕಾರದಿಂದ ಬರುವ ಪರಿಹಾರ ಒದಗಿಸುವಂತೆ ತಿಳಿಸಿದರು.