ವಸತಿ ನಿಲಯದಲ್ಲಿ ಓದಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ವಿಜಯಪುರ,ಮೇ.31:ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಅಡಿಯ ವಸತಿ ನಿಲಯದಲ್ಲಿ ಅಧ್ಯಯನ ಮಾಡಿ 10 ಮತ್ತು 12 ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಚಿನ ಲಮಾಣಿ, ಸಾನಿಕಾ ಲಮಾಣಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ದಲಿತ ವಿದ್ಯಾರ್ಥಿ ಪರಿಷತ್‍ನ ಸಂಸ್ಥಾಪಕ ಅಧ್ಯಕ್ಷÀ ಶ್ರೀನಾಥ ಪೂಜಾರಿ ಅವರ ಮಾರ್ಗದರ್ಶನದಂತೆ 2024-25ನೇ ಸಾಲಿನಲ್ಲಿ ವಸತಿ ನಿಲಯಗಳಲ್ಲಿ ಓದಿ ಅತಿ ಹೆಚ್ಚಿನ ಅಂಕ ಪಡೆದು ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಹವಾಗಿ 5000 ನೀಡುತ್ತಿದ್ದೇವೆ ಎಂದು ದಲಿತ ವಿದ್ಯಾರ್ಥಿ ಪರಿಷತ್‍ನ ಜಿಲ್ಲಾ ಸಹ ಸಂಚಾಲಕ ಮಹಾದೇವ ಚ¯ವಾದಿ ಅವರು ಸನ್ಮಾನಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಾಕಷ್ಟು ಬಡ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಅಂತಹ ಮಕ್ಕಳಿಗೆ ಸರಕಾರದ ಸಮಾಜ ಕಲ್ಯಾಣ ಇಲಾಖೆಯಡಿ ವಸತಿ ನಿಲಯಗಳನ್ನು ಮಾಡಿಕೊಟ್ಟು ಸಾಕಷ್ಟು ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಮಾಡುತ್ತಿದ್ದು, ಇಲ್ಲಿ ಕಲಿತÀ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಯನ್ನು ಅಲಂಕರಿಸಿರುವುದು ಶ್ಲಾಘನೀಯ ವಿಷಯವಾಗಿದೆ ಎಂದರು.
ಈ ವೇಳೆ ಬಸವನ ಬಾಗೇವಾಡಿ ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕÀ ಭವಾನಿ ಪಾಟೀಲ ಅವರು ಮಾತನಾಡಿ, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಿ ಶುಭ ಹಾರೈಸಿ, ಮುಂದಿನ ಮಕ್ಕಳಿಗೆ ನೀವೇ ಮಾದರಿಯಾಗಿದ್ದಿರಿ. ಹೀಗೆ ಉನ್ನತವಾದ ಅಧ್ಯಯನ ಮಾಡಿ ಜೀವನದಲ್ಲಿ ಯಶಸ್ಸು ಕಂಡು ಸಮಾಜದ ಇತರರಿಗೂ ಸಹಾಯ ಮಾಡುವಂತಾಗಿ ಎಂದು ಶುಭ ಹಾರೈಸಿದರು.
ಈ ವೇಳೆ ಕಚೇರಿ ಅಧೀಕ್ಷಕ ದಫೇದಾರ ಅವರು ಮಾತನಾಡಿದರು. ದಲಿತ ವಿದ್ಯಾರ್ಥಿ ಪರಿಷತ್‍ನ ಸಂಚಾಲಕ ಅಲ್ಲಾಭಕ್ಷ ಪಿಂಜಾರ, ಸುರೇಶ ಕಣಕಲ, ಪ್ರಕಾಶ ಚಲವಾದಿ, ಭೀಮಶಿ ಚಲವಾದಿ, ವಸತಿ ನಿಲಯದ ವಿದ್ಯಾರ್ಥಿಗಳು, ನಿಲಯಪಾಲಕರು ಹಾಗೂ ಸಿಬ್ಬಂದಿ ವರ್ಗದವರೂ ಇದ್ದರು.