ಸೌಲಭ್ಯ ಪಡೆದು ಸ್ಥಿತಿವಂತರಾಗಿ: ಎಸ್.ಎ. ಇನಾಮದಾರ
ವಿಜಯಪುರ,ಮೇ.31:ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಪಡೆದು ತಮ್ಮ ಜಮೀನುಗಳಲ್ಲಿ ಉತ್ತಮ ಫಸಲು ಬೆಳೆದು ರೈತರು ಆರ್ಥಿಕವಾಗಿ ಸ್ಥಿತಿವಂತರಾಗಬೇಕು ಎಂದು ವಿಜಯಪುರ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಡಾ. ಎಸ್.ಎ. ಇನಾಮದಾರ ಹೇಳಿದರು.
ತಿಕೋಟಾ ತಾಲೂಕಿನ ಟಕ್ಕಳಗಿ ಗ್ರಾಮದಲ್ಲಿ ಬೀಜ ವಿತರಣಾ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಬೀಜ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಧುಕರ ಜಾಧವ, ಗ್ರಾ.ಪಂ. ಅಧ್ಯಕ್ಷ ಶಿವಪ್ಪ ಚಲವಾದಿ, ರಘುನಾಥ ಚೌಧರಿ, ಆತ್ಮಾ ಕಾಟಕರ, ರಾಮಗೊಂಡ ಚೌಧರಿ, ವಿಠೋಬಾ ಕರ್ಪೆ ಮುಂತಾದವರು ಇದ್ದರು.