ರೈತರು ಆರ್ಥಿಕವಾಗಿ ಸಬಲರಾಗಿರಿ: ಟಿ.ಎ. ಸೋಲಾಪುರಕರ
ವಿಜಯಪುರ,ಮೇ.31:ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಬಿತ್ತಿ ಅಧಿಕ ಇಳುವರಿ ಪಡೆದು ತನ್ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಕೋಟಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಟಿ.ಎ. ಸೋಲಾಪುರಕರ ಅವರು ಹೇಳಿದರು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳಾದ ಹೆಸರು, ತೊಗರಿ, ಸಜ್ಜೆ, ಶೇಂಗಾ, ಗೋಧಿ, ಜೋಳ ಮುಂತಾದ ಬೀಜಗಳನ್ನು ರಿಯಾಯಿತಿ ದರದಲ್ಲಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಗತಿಪರ ರೈತರಾದ ಆರ್.ಬಿ.ದೇಸಾಯಿ, ಬಿ.ಜಿ. ವಿಭೂತಿ, ಜೆ.ಎಮ್. ಪಾಟೀಲ, ಕೃಷಿ ಅಧಿಕಾರಿ ಆರ್.ಎಮ್. ಬಿದರಿ, ಎಮ್.ಎಸ್. ತಂಗಾ, ಎಮ್.ಎಮ್. ಬಾಳಿಕಾಯಿ, ಕಿರಣ ಜತ್ತಿ, ಶಿವಾನಂದ ಬಂಡಗಾರ, ಮುತ್ತಪ್ಪ ಶಿರಹಟ್ಟಿ ಮುಂತಾದವರು ಇದ್ದರು.