ಪೌರಕಾರ್ಮಿಕರ ದಿನಾಚರಣೆ
ಲಕ್ಷ್ಮೇಶ್ವರ,ಸೆ24: ಪಟ್ಟಣದ ಪುರಸಭೆ ಆವರಣದಲ್ಲಿ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷ ಯಲ್ಲವ್ವ ದುರ್ಗಣ್ಣವರ ಮತ್ತು ಉಪಾಧ್ಯಕ್ಷ ಫಿರ್ದೋಷ ಆಡೂರ ಮತ್ತು ಸರ್ವ ಸದಸ್ಯರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಅಧಿಕಾರಿ ಮಹೇಶ್ ಹಡಪದ ಅವರು ಪೌರ ಕಾರ್ಮಿಕರು ಸ್ಥಳೀಯ ಸಂಸ್ಥೆಗಳ ಜೀವನಾಡಿಗಳಿದ್ದಂತೆ ಅವರು ಕೋವಿಡ್ ಸಮಯದಲ್ಲಿ ಸಲ್ಲಿಸಿದ ಸೇವೆ ಅಪಾರ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಈಶ್ವರ್ ಮೆಡ್ಲೇರಿ ಪ್ರಾಸ್ತಾವಿಕ ಮಾತನಾಡಿ ಪೌರಕಾರ್ಮಿಕರು ಇಡೀ ನಗರವನ್ನು ಶುಚಿಗೊಳಿಸಿ ತಮ್ಮ ಜೀವವನ್ನು ಪಣಕ್ಕಿಟ್ಟು ಕಾಯಕವೇ ಕೈಲಾಸ ಎಂದು ಸೇವೆ ಸಲ್ಲಿಸುತ್ತಿರುವುದು ಅವಿಸ್ಮರಣೀಯ ಎಂದರು.
ಕಾರ್ಯಕ್ರಮದಲ್ಲಿ ಪೂರ್ಣಿಮಾ ಪಾಟೀಲ್, ಅಶ್ವಿನಿ ಅಂಕಲ್ ಕೋಟಿ, ಪ್ರವೀಣ್ ಬಾಳಿಕಾಯಿ, ಮಹೇಶ ಹೊಗೆಸೊಪ್ಪಿನ, ರಾಜು ಕುಂಬಿ, ಗ್ರೇಡ್ 2 ತಹಸಿಲ್ದಾರ್, ಮಂಜುನಾಥ್ ಅಮಾಸಿ, ಉಪಾಧ್ಯಕ್ಷ ಫೀರ್ ದೂಶ ಆಡೂರ ಮಾತನಾಡಿದರು.
ವೇದಿಕೆ ಮೇಲೆ ಪಿಎಸ್‍ಐ ಈರಣ್ಣ ರಿತ್ತಿ, ಸದಸ್ಯರಾದ ವಿಜಯ ಕರಡಿ, ರಾಮು ಗಡದವರ, ಸಾಹೇಬ್ ಜಾನ್ ಹವಾಲ್ದಾರ, ಜಯವ್ವ ಅಂದಲಿಗಿ, ಮಂಜವ್ವ ನಂದಣ್ಣವರ, ವಾಣಿ ಹತ್ತಿ, ಬಸವಣ್ಣಪ್ಪ ನಂದಣ್ಣನವರ, ಮಂಜವ್ವ ಗುಂಜಳ ಸೇರಿದಂತೆ ಅನೇಕರಿದ್ದರು.
ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರನ್ನು ಪುರಸಭೆಯ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಪೆÇ್ರೀತ್ಸಾಹ ಧನದ ಚಕ್ ನೀಡಿ ಸನ್ಮಾನಿಸಲಾಯಿತು.
ಕಂದಾಯ ಅಧಿಕಾರಿ ಶಿವಾನಂದ್ ಅಜ್ಜಣ್ಣನವರ ಪ್ರಾಸ್ತಾವಿಕ ಮಾತನಾಡಿದರು. ಹನುಮಂತ ನಂದಣ್ಣನವರ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಮಂಜುನಾಥ್ ಮದಗಲ್ಲ, ಮಂಜುಳಾ ಹೂಗಾರ ಸಿಬ್ಬಂದಿ ವರ್ಗದವರು ಇದ್ದರು.