ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ; ಶಾಸಕರ ಸಲಹೆ
ಸಂಜೆವಾಣಿ ವಾರ್ತೆ
ಜಗಳೂರು.ಸೆ.೨೪: ಪೌರ ಕಾರ್ಮಿಕರ ಮಕ್ಕಳು ಪೌರ ಕಾರ್ಮಿಕರಾಗದಂತೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಉನ್ನತ ಅಧಿಕಾರಿಯನ್ನಾಗಿ ಮಾಡಬೇಕೆಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೆಂದ್ರಪ್ಪ ಸಲಹೆ ನೀಡಿದರು.ಪಟ್ಟಣ ಪಂಚಾಯತಿ ಆವರಣದಲ್ಲಿ ಪೌರ ಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿದಿನ ಬೆಳ್ಳಂಬೆಳಿಗ್ಗೆ ಪೌರ ಕಾರ್ಮಿಕರು ಬೀದಿ ಬೀದಿಗಳ ಕಸಗುಡಿಸಿ ಸ್ವಚ್ಚತೆ ಮಾಡದಿದ್ದರೆ ಪಟ್ಟಣ ಶುಚಿಯಾಗಿರಲು ಸಾಧ್ಯವಾಗುತ್ತಿರಲಿಲ್ಲ ಪ್ರತಿಯೊಬ್ಬರು ಅವರನ್ನು ಗೌರವದಿಂದ ಕಾಣುವಂತಾಗಬೇಕು ವಿದ್ಯೆ ಸಾಧಕನ ಸೊತ್ತು ಪೌರ ಕಾರ್ಮಿಕರ ಮಗ ಬಸವಂತಪ್ಪನವರು ಮಾಯಕೊಂಡ ಕ್ಷೇತ್ರದಿಂದ ಸ್ಪರ್ಧಿಸಿ ಇಂದು ಶಾಸಕರಾಗಿದ್ದಾರೆ ನಾನು ಸಹ ನಾಲಂದ ಕಾಲೇಜಿನಲ್ಲಿ ಜವಾನನಾಗಿ ಕಾರ್ಯ ನಿರ್ವಹಿಸಿ ಇಂದು ಶಾಸಕನಾಗಿದ್ದೇನೆ ವಿದ್ಯೆ ಇದ್ದರೆ ಯಾರು ಏನು ಬೇಕಾದರೂ ಆಗಬಹುದು ನಿಮ್ಮ ಮಕ್ಕಳಿಗೂ ಸಹ ಉತ್ತಮ ವ್ಯಾಸಂಗ ಮಾಡಿಸಿ ಉನ್ನತ ಅಧಿಕಾರಿಯನ್ನಾಗಿ ಮಾಡಬೇಕೆಂದು ತಿಳಿಸಿದ ಅವರು ಪೌರ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ ಸರಕಾರದ ಗಮನ ಸೆಳೆಯಲಾಗುವುದು ಜಾಗ ದೊರೆತರೆ ನಿವೇಶನ ಕಲ್ಪಿಸಿಕೊಡಲಾಗುವುದೆಂದು ಭರವಸೆ ನೀಡಿದರು.ನಗರಾಭಿವೃದ್ಧಿ ಕೋಶ ಜಿಲ್ಲಾ ಯೋಜನಾಧಿಕಾರಿ ಮಹಾಂತೇಶ್ ಮಾತನಾಡಿ 2022 ರಲ್ಲಿ ಪೌರ ಕಾರ್ಮಿಕರ ನೇರ ನೇಮಕಾತಿ ಮಾಡಿಕೊಳ್ಳಲಾಗಿದ್ದು ಪೌರ ಕಾರ್ಮಿಕರಿಗೆ ಸ್ವಂತ ಜಾಗವಿದ್ದರೆ 7 ಲಕ್ಷ ಅನುದಾನವನ್ನು ನೀಡಲಾಗುವುದು ಜಾಗ ಲಭ್ಯವಿದ್ದರೆ ಪ್ರಸ್ತಾವನೆ ಕಳಿಸಿದ ಕೂಡಲೇ ಅನುದಾನ ಮಂಜೂರು ಮಾಡಲಾಗುವುದು ಪಿಎಂಜೆಜೆವೈ ಹಾಗೂ ಪಿಎಂಎಸ್‌ಎಸ್‌ವೈ ಯೋಜನೆಯಡಿ ವಿಮೆ ಪಾವತಿಸಿದರೆ ಅಪಘಾತ ಸಂಭವಿಸಿದರೆ ಅವಲಂಭಿತ ಕುಟುಂಬಕ್ಕೆ 4 ಲಕ್ಷ ವಿಮೆಯ ಹಣ ಸಂದಾಯವಾಗಲಿದೆ ಪ್ರತಿಯಬ್ಬರೂ ವಿಮೆ ಮಾಡಿಸಿ ಜೀವನದ ಭದ್ರತೆಯನ್ನು ಕಾಪಾಡಿಕೊಳ್ಳಬೇಕೆಂದರು.