ಪೌರ ಕಾರ್ಮಿಕರ ದಿನಾಚರಣೆ
ನವಲಗುಂದ,ಸೆ.24: ಗಾಳಿ, ಮಳೆ, ಬಿಸಿಲು, ಚಳಿ ಎನ್ನದೆ, ದಿನನಿತ್ಯ ನಸುಕಿನ ಜಾವದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು, ಸ್ವಚ್ಛತಾ ರೂವಾರಿಗಳು. ಕೊರೊನಾದಂತ ಸಂದಿಗ್ಧ ಸ್ಥಿತಿಯಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ಬಿಡುವಿಲ್ಲದ ಕಾರ್ಯ ಮಾಡಿದ್ದು ಶ್ಲಾಘನೀಯ ಎಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.
ಅವರು ಪಟ್ಟಣದ ಪುರಸಭೆ ಆವರಣದಲ್ಲಿ ಪೌರಕಾರ್ಮಿಕರ ದಿನಾಚರಣೆ ಉದ್ದೇಶಿಸಿ ಮಾತನಾಡಿದದರು. ಮುಖ್ಯಾಧಿಕಾರಿ ಎಸ್ ಪಿ ಪೂಜಾರ ಮಾತನಾಡಿ ನಗರವನ್ನು ಪ್ರತಿನಿತ್ಯ ಸ್ವಚ್ಛವಾಗಿರಿಸಲು ಸಾಕಷ್ಟು ಶ್ರಮಿಸುತ್ತಿರುವ ಕಾರ್ಮಿಕರ ಕೆಲಸದಿಂದ ಸ್ವಚ್ಛತೆ ವಿಷಯದಲ್ಲಿ ನವಲಗುಂದ ಪುರಸಭೆ ಜಿಲ್ಲೆಯಲ್ಲಿಯೇ ಮೊದಲನೇ ಸ್ಥಾನದಲ್ಲಿದೆ ಎಂದ ಅವರು ಕಾರ್ಮಿಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಪುರಸಭಾ ಅಧ್ಯಕ್ಷ ಶಿವಾನಂದ ತಡಸಿ ಮಾತನಾಡಿ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪೌರ ಕಾರ್ಮಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ತಾಲ್ಲೂಕಾ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಬಸವರಾಜ ರಾಮಗಿರಿ ಮಾತನಾಡಿ, ಪೌರ ಕಾರ್ಮಿಕರಿಗೆ ತಕ್ಷಣವೇ ನಿವೇಶನ ಒದಗಿಸುವಂತಾಗಬೇಕು ಎಂದು ಶಾಸಕ ಹಾಗೂ ಮುಖ್ಯಾಧಿಕಾರಿ ಅಧ್ಯಕ್ಷರಲ್ಲಿ ಮನವಿ ಮಾಡಿದರು.
ಪುರಸಭೆ ಉಪಾಧ್ಯಕ್ಷರು ಸದಸ್ಯರು ವೇದಿಕೆಯಲ್ಲಿದ್ದರು ಇದೇ ವೇಳೆ ಪುರಸಭೆ ಎಲ್ಲ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ನಿಂಗಪ್ಪ ದೊಡಮನಿ, ವಿಷ್ಣು ಗುತ್ತೇಪ್ಪನವರ, ಹಣಮಂತಪ್ಪ ಹೇಬಸೂರ, ಯಲ್ಲಪ್ಪ ಆಸಂಗಿ, ಶಿವಪುತ್ರ ಹುನಸಿಮರದ ನಿಂಗಯ್ಯ ಹೊಸರನ್ನವರ, ಕನಕವ್ವ ದೊಡಮನಿ, ಅಶೋಕ ಹುಳಕಣ್ಣವರ, ಪರಶುರಾಮ ಹುನಸಿಮರದ, ಕಾವೇರಿ ಗುತ್ತೇಪ್ಪನವರ, ಉಡಚವ್ವ ಹೋನಕುದರಿ, ಮುದಕವ್ವ ಹೊಸರನ್ನವರ, ಪರಸಪ್ಪ ಮುಲಿಮನಿ, ಈರಣ್ಣ ದೊಡಮನಿ ಲೋಹಿತ್ ಪಾಚಂಗಿ, ಹನುಮಂತ ಆಸಂಗಿ, ದಾವಲಸಾಬ್ ಹುಗ್ಗಿ, ಸಂತೋಷ ಪವಾರ, ಅಬ್ದುಲರೆ ಹಿಮಾನ ಮದ್ರಾಸಿ, ಮೈಲಾರೆಪ್ಪ ಗುತ್ತೇಪ್ಪನವರ, ತುಕಾರಾಂ ಪವಾರ, ಸೈಪುಲ್ ಬಬರ್ಚಿ, ಇಂದ್ರವ್ವ ಕಾಳಿ, ಲಕ್ಷ್ಮೀ ಹೇಬಸೂರ, ಲಲಿತಾ ಹುಳಕಣ್ಣವರ, ರೇಣವ್ವ ಹೊಸರಣ್ಣವರ ಸೇರಿದಂತೆ ನೂರಾರು ಪೌರಕಾರ್ಮಿಕರು ಕಾರ್ಯಕ್ರಮದಲ್ಲಿದ್ದರು.