ಶೀಘ್ರ ಪೌರಕಾರ್ಮಿಕರಿಗೆ ಮನೆ ನಿರ್ಮಾಣ: ಶಾಸಕರಾದ ಲತಾ ಭರವಸೆ
ಸಂಜೆವಾಣಿವಾರ್ತೆ
ಹರಪನಹಳ್ಳಿ.ಸೆ.೨೪; ಪಟ್ಟಣದಲ್ಲಿ ಐದು ಎಕರೆ ಜಮೀನು ಕಾಯ್ದಿರಿಸಲಾಗಿದೆ, ಶೀಘ್ರ ಪೌರಕಾರ್ಮಿಕರಿಗೆ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು. ಸ್ಥಳೀಯ ಪುರಸಭಾ ಕಚೇರಿ ಆವರಣದಲ್ಲಿ ಸೋಮವಾರ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೌರಕಾರ್ಮಿಕರಿಗೆ ಸೂರು ಕಲ್ಪಿಸಲು ಈಗಾಗಲೇ 5 ಎಕರೆ ಜಮೀನು ಕಾಯ್ದಿರಿಸಲಾಗಿದೆ, ಆದಷ್ಟು ಬೇಗ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಹೇಳಿದರು. ಪೌರ ಕಾರ್ಮಿಕರ ಇತರ ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯ ಮಂತ್ರಿಯವರ ಬಳಿ ಚರ್ಚಿಸುವುದಾಗಿ ತಿಳಿಸಿದ ಅವರು ಪಟ್ಟಣದಲ್ಲಿ ಪಿ.ಜೆ.ಕೇಂದ್ರವನ್ನು ಆರಂಭಿಸಲಾಗಿದೆ ಆದ್ದರಿಂದ ಪೌರ ಕಾರ್ಮಿಕರು ಮಕ್ಕಳನ್ನು ಇಲ್ಲಿಯೆ ಪಿ.ಜೆ.ವರೆಗೂ ಓಧಿಸಬಹುದು, ಮಕ್ಕಳಿಗೆ ಒಳ್ಳೆ ವಿದ್ಯಾಬ್ಯಾಸ ಕೊಡಿ ಎಂದು ಕಿವಿಮಾತು ಹೇಳಿದರು. ತಮ್ಮ ದಿನ ನಿತ್ಯದ ಕಾಯಕದ ಜೊತೆ ಮಾಸ್ಕ್, ಗ್ಲೌಸ್, ಜಾಕೇಟ್ಗಳನ್ನು ಉಪಯೋಗಿಸಿ ಕೊಂಡು ತಮ್ಮಗಳ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಅವರು ಪೌರ ಕಾರ್ಮಿಕರಿಗೆ ತಿಳಿಸಿದರು. ಪುರಸಭಾ ಹಿರಿಯ ಸದಸ್ಯ ಎಂ.ವಿ.ಅAಜಿನಪ್ಪ ಮಾತನಾಡಿ ಯೋದರೂ ಗಡಿ ಕಾಪಾಡಿದರೆ ಪೌರ ಕಾರ್ಮಿಕರು ನಮ್ಮ ಆರೋಗ್ಯವನ್ನು ಕಾಪಾಡುವರು, ಪೌರ ಕಾರ್ಮಿಕರ ವೃತ್ತಿ ವಂಶಪಾರAಪರ್ಯವಾಗಬಾರದು, ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ ನೀಡಿ ಉನ್ನತ ಹುದ್ದೆಗಳಿಗೆ ಹೋಗವಂತೆ ಮಾಡಿ ಎಂದು ಹೇಳಿದರು. ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಮಾತನಾಡಿ ಪೌರ ಕಾರ್ಮಿಕರಿಗೆ ನಿವೇಶನ ಒದಗಿಸಬೇಕು, ಕ್ಲಿನರ್, ಚಾಲಕರನ್ನು ಪೌರ ಕಾರ್ಮಿಕರೆಂದು ಪರಿಗಣಿಸಬೇಕು, ಜ್ಯೋತಿ ಸಂಜೀವಿನಿ ಯೋಜನೆಯಡಿ ಸೇರಿಸಲಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಪೌರ ಕಾರ್ಮಿಕರ ಪರವಾಗಿ ಶಾಸಕರಿಗೆ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು. ಹಿರಿಯ ಸದಸ್ಯ ಅಬ್ದುಲ್ ರೇಹಮಾನ, ಜಾಕೀರ್ ಸರ್ಖಾವಸ್, ಪುರಸಭಾ ವ್ಯವಸ್ಥಾಪಕ ಅಶೋಕ ಮಾತನಾಡಿದರು. ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಿಸಲಾಯಿತು.ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಲಾಟಿದಾದಾಪೀರ, ಭರತೇಶ, ಮಂಜುನಾಥ ಇಜಂತಕರ್, ಕೊಟ್ರೇಶ, ಕಿರಣ್ಶಾನ್ ಬಾಗ್, ವಿನಯ ಗೌಳಿ, ಹನುಮವ್ವ, ಶೋಭಾ, ಜಾವೇದ್ಹಾಗೂ ಶೆಕ್ಷಾವಲಿ, ವಾಗೀಶ, ಹನುಮಂತಪ್ಪ, ಚಿಕ್ಕೇರಿ ಬಸಪ್ಪ, ಮಲ್ಲೆಪ್ಪ, ಸಿಆರ್‌ಪಿ ಸಲೀಂ, ಮತ್ತೂರು ಬಸವರಾಜ, ಇತರರು ಇದ್ದರು.