ನಾಳೆ ನಡೆಯುವ ಬೃಹತ್ ಪ್ರತಿಭಟನೆ ಯಶಸ್ವಿಗೊಳಿಸಲು ಸಿರಗಾಪೂರ ಮನವಿ
ಕಲಬುರಗಿ: ಮೇ.31:ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಜಾರಿಯಾಗಿರುವ ಸಂವಿಧಾನದ 371(ಜೆ) ಕಲಂ ವಿರೋಧಿ ಶಕ್ತಿಗಳ ವಿರುದ್ಧ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಜೂನ್ 1 ರಂದು ಬೆಳಿಗ್ಗೆ 10 ಗಂಟೆಗೆ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಗೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕನ್ನಡ ಭೂಮಿ ಜಾಗೃತಿ ಸಮಿತಿ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕಲ್ಯಾಣ ಕರ್ನಾಟಕ ಭಾಗದ ಏಳಿಗೆ ಸಹಿಸದೆ ಹೊಟ್ಟೆ ಕಿಚ್ಚು ಮನೋಭಾವ ಹೊಂದಿರುವ ಬೆಂಗಳೂರಿನ ಹಸಿರು ಪ್ರತಿಷ್ಠಾನ ಸಂಘಟನೆಯು 371 ಜೆ ಕಲಂ ತಿದ್ದುಪಡಿ ಮಾಡುವಂತೆ ಷಡ್ಯಂತ್ರ ರೂಪಿಸಿ, ಬೆಂಗಳೂರಿನಲ್ಲಿ ಜೂನ್ 1 ರಂದು ನಮ್ಮ ಭಾಗದ ಅಭಿವೃದ್ಧಿ ವಿರುದ್ಧ ಪ್ರತಿಭಟಿಸಲು ಸಂಚು ರೂಪಿಸಿದೆ.ಅನೇಕ ದಶಮಾನಗಳ ಹೋರಾಟದ ಫಲವಾಗಿ ಸಂವಿಧಾನದ 371 ಜೆ ಲಭಿಸಿದೆ.ಕೆಲುವು ನೆರೆಯ ಜಿಲ್ಲೆಗಳು ಯಾವುದೇ ಹೋರಾಟ ಮಾಡದೇ ನಮಗೂ ಸ್ಥಾನಮಾನ ನೀಡುವಂತೆ ಬೆಡಿಕೆ ಇಟ್ಟಿತ್ತು.ಇದಕ್ಕೆ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳಿಂದ ವಿರೋಧ ವ್ಯಕ್ತವಾಗಿದ್ದರಿಂದ ಅದನ್ನು ಕೈ ಬಿಡಲಾಯಿತು.ಇದೇ ಕಾರಣವಿಟ್ಟುಕೊಂಡು ಬೆಂಗಳೂರು ಮೂಲದ ಸಂಘಟನೆಯ ಜೊತೆ ಕೈಜೋಡಿಸಿ ನಮ್ಮ ಭಾಗದ ವಿರುದ್ಧ ಹೋರಾಟದಲ್ಲಿ ಭಾಗವಹಿಸಲು ಮುಂದೆ ಬಂದಿದೆ.ಸ್ವಾಭಿಮಾನಕ್ಕೆ ಧಕ್ಕೆ ತರುವ ಹುನ್ನಾರ ನಡೆಯುತ್ತಿದೆ.ಆದ್ದರಿಂದ ಈ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಬೃಹತ್ ಪ್ರತಿಭಟನೆಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಸಾವಿರಾರು ವಿದ್ಯಾರ್ಥಿಗಳು,ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಹೋರಾಟಗಾರು, ಸಾಹಿತಿಗಳು,ಬುದ್ಧಿ ಜೀವಿಗಳು ಪಾಲ್ಗೋಳ್ಳಲಿದ್ದಾರೆ.ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.