ಜೂ. 2ರಂದು ದೇವ ಋಷಿ ನಾರದರ ಜಯಂತಿ
ಬೀದರ್: ಮೇ.31:ಜೂನ್ 2ರಂದು ನಗರದ ಅಂಬೇಡ್ಕರ್ ವೃತ್ತದ ಹತ್ತಿರವಿರುವ ವಿದ್ಯಾರಣ್ಯ ಪ್ರೌಢಶಾಲೆಯಲ್ಲಿರುವ ಗಿರಿಜಾ ಭವನದಲ್ಲಿ ಕೇಶವ ಕಾರ್ಯ ಸಂವರ್ಧನ ಸಮಿತಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಬೀದರ್ ಇವರ ಸಂಯುಕ್ತ ಆಶ್ರಯದಲ್ಲಿ ಜಗತ್ತಿನ ಮೊಟ್ಟ ಮೊದಲ ಪತ್ರಕರ್ತರೆನಿಸಿರುವ ದೇವ ಋಷಿ ನಾರದರ ಜಯಂತಿ ಆಚರಿಸಲಾಗುತ್ತಿದೆ.
ಕಲಿಯುಗಾಬ್ದಿ 5126 ಶ್ರೀ ಶಾಲಿವಾಹನ ಶಕೆ 1947 ಕ್ರೋಧೀ ನಾಮ ಸಂವತ್ಸರ, ವೈಶಾಖ ಕೃಷ್ಣ ಏಕಾದಶಿ ದಿನವಾದ ಜೂನ್ 2ರಂದು ಬೆಳಿಗ್ಗೆ 10 ಗಂಟೆಗೆ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರು ಹಾಗೂ ಇತ್ತೀಚೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ವತಿಯಿಂದ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಶಶಿಕಾಂತ ಎಸ್ ಶಂಭೋಳ್ಳಿ ಅವರು ಭಾಗವಹಿಸಲಿದ್ದು ವಕ್ತಾರರಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ನಾಗೇಶ ರಡ್ಡಿ ಅವರು ಪಾಲ್ಗೊಳ್ಳುವರು. ಕೇಶವ ಕಾರ್ಯ ಸಂವರ್ಧನ ಸಮಿತಿಯ ಅಧ್ಯಕ್ಷರಾದ ಮಾರೂತಿರಾವ ಪಂಚಭಾಯಿ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಹಾಗೂ ಕೇಶವ ಕಾರ್ಯ ಸಂವರ್ಧನಾ ಸಮಿತಿಯ ಕಾರ್ಯದರ್ಶಿ ಎನ್ ಕೃಷ್ಣಾರೆಡ್ಡಿ ಸರ್ವರನ್ನು ಸ್ವಾಗತಿಸುವರು.