ಮುನ್ನಹಳ್ಳಿ ಯುವಕನ ಕೊಲೆ: ನಾಲ್ವರ ಬಂಧನ
ಆಳಂದ:ಮೇ.31: ತಾಲೂಕಿನ ಮುನ್ನೊಹಳ್ಳಿ ಗ್ರಾಮದ ಹೀರಾಲಾಲ ಉಸ್ಮಾನಸಾಬ ಲದಾಫ್ ಎಂಬುವನ ಕೊಲೆಯಾದ ಹಿನ್ನೆಲೆಯಲ್ಲಿ ನಾಲ್ವರು ಆರೋಪಿತರನ್ನು ಬಂಧಿಸಿರುವ ಕುರಿತು ನರೋಣಾ ಠಾಣೆಯ ಅಧಿಕಾರಿಗಳಿ ತಿಳಿಸಿದ್ದಾರೆ.
ಗ್ರಾಮದ ಹೀರಾಲಾಲ ತಂದೆ. ಉಸ್ಮಾನಸಾಬ ಲದಾಫ್ (38) ಎಂಬ ತನ್ನಿಗೆ ಅದೇ ಗ್ರಾಮದ ರವಿ ಜಾನೆ, ಶೇಖರ ಜಾನೆ ಎಂಬುವರು ಮೇ 23 ರಂದು ರಾತ್ರಿ 9:30ರ ಸುಮಾರಿಗೆ ಗ್ರಾಮದ ವೈನಶಾಪ ಹತ್ತಿರ ಕಲ್ಲು ಮತ್ತು ಬಡಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಾಳುವಿಗೆ ಸಂಬಂಧಿಕರು ತಕ್ಷಣ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಮೇ 25 ರಂದು ಸಂಜೆ ಸಾವನ್ನಪ್ಪಿ ಘಟನೆ ನಡೆದಿದೆ.
ಘಟನೆಯ ವಿವರ: ಸಾವನ್ನಪ್ಪಿದ ಹೀರಾಲಾಲ ತಂದೆ. ಉಸ್ಮಾನಸಾಬ ಲದಾಫ್ ಎಂಬಾತನ ಜತೆ ರವಿ ತಂದೆ ಪ್ರಭು ಜಾನೆ ಎಂಬಾತನ್ನು ಮಹಿಳಾ ಅನೈತಿಕ ಸಂಬಂಧ ಹೊಂದಿದ ವಿಷಯದಲ್ಲಿ ಹೀರಾಲಾಲ ಮತ್ತು ರವಿ ಜಾನೆಗೂ ಕಳೆದ 2-3 ವರ್ಷಗಳಿಂದ ಇವರ ಮಧ್ಯೆ ದ್ವೇಷ ಬೆಳೆದಿತ್ತು. ಇದನ್ನೇ ಗಮನದಲ್ಲಿ ಇಟ್ಟುಕೊಂಡು ಜೈಬುನಬೀ ಸಹಕಾರದೊಂದಿಗೆ ರವಿ ಮತ್ತು ಶೇಖರ ಇಬ್ಬರು ಸೇರಿಕೊಂಡು ಹೀರಾಲಾಲ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದೆ. ಇದರಲ್ಲಿ ಜೈಬುನಬೀ ಆರೋಪಿ ಇದ್ದಾಳೆಂದು ಪೆÇಲೀಸ ತಿಳಿಸಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಹಾಕೆ ಅವರು ಮುನ್ನೊಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಆರೋಪಿಗಳನ್ನು ಬಂಧಿಸುವಂತೆ ಸಿಬ್ಬಂದಿಗಳಿಗೆ ತಾಕೀತು ಮಾಡಿದ್ದರು.