ಕಾರುಗಳ ಮೇಲೆ ಟ್ರ್ಯಾಕ್ಟರ್‌ ನುಗ್ಗಿಸಿದ ವ್ಯಕ್ತಿ
ಸಂಜೆವಾಣಿ ವಾರ್ತೆ
ದಾವಣಗೆರೆ, ಮೇ.31; ಕುಡಿತದ ಅಮಲಿನಲ್ಲಿ ತೇಲುತ್ತಿದ್ದ ಟ್ರ್ಯಾಕ್ಟರ್ ಚಾಲಕನೊಬ್ಬ ಅದೇ ಮತ್ತಿನಲ್ಲಿ ಊರಿಗೆ ಮರಳುವ ಭರದಲ್ಲಿ ಕಾರು ಶೋರೂಂ ಸರ್ವೀಸ್‌ಗೆ ಬಂದಿದ್ದ ಕಾರುಗಳ ಮೇಲೆ ಟ್ರ್ಯಾಕ್ಟರ್‌ ನುಗ್ಗಿಸಿದ ಪರಿಣಾಮ ನಾಲ್ಕೈದು ಕಾರುಗಳು ಜಖಂಗೊಂಡಿದ್ದರಿಂದ ಕುಡುಕ ಚಾಲಕನಿಗೆ ಶೋರೂಂ ಸಿಬ್ಬಂದಿ ಧರ್ಮದೇಟು ಹಾಕಿದ ಘಟನೆ ನಗರದ ಆವರಗೆರೆ ಸಮೀಪ ಗುರುವಾರ ಮಧ್ಯಾಹ್ನ ಸಂಭವಿಸಿದೆ. ತಾಲೂಕಿನ ಕರಿನಾಯ್ಕನಹಳ್ಳಿ ಗ್ರಾಮದ ರುದ್ರೇಶ ಕುಡಿದ ಅಮಲಿನಲ್ಲಿ ಎಡವಟ್ಟು ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಬಂದು ಆವರಗೆರೆ ಸಮೀಪದ ಟಾಟಾ ಮೋಟಾರ್ಸ್‌ನ ಶ್ರೀ ಆದಿಶಕ್ತಿ ಕಾರು ಶೋ ರೂಂ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆಸಿ, ಶೋರೂಂ ಸಿಬ್ಬಂದಿ ಕೈಗೆ ತಗಲಿ ಹಾಕಿಕೊಂಡ ವ್ಯಕ್ತಿ ತನ್ನ ಊರಿನಿಂದ ಬೆಳಿಗ್ಗೆ ಟ್ರ್ಯಾಕ್ಟರ್‌ ಸರ್ವೀಸ್‌ಗೆ ಹೋಗಿದ್ದ ರುದ್ರೇಶ ಅಲ್ಲಿ ಕೆಲಸ ತಡವಾಗುತ್ತದೆಂಬ ಕಾರಣಕ್ಕೆ ಉರಿ ಬಿಸಿಲಿನಲ್ಲಿ ಮದ್ಯ ಸೇವನೆ ಮಾಡಿದ್ದಾನೆ. ನಿನ್ನೆ, ಮೊನ್ನೆಗಿಂತಲೂ ಹೆಚ್ಚು ಬಿಸಿಲಿನ ತಾಪವು ಇದ್ದುದರಿಂದ ಸಹಜವಾಗಿಯೇ ಮದ್ಯದ ಅಮಲೇರಿದೆ. ಟ್ರ್ಯಾಕ್ಟರ್‌ ಸರ್ವೀಸ್ ಆಗಿದ್ದರಿಂದ ರುದ್ರೇಶ ಟ್ರ್ಯಾಕ್ಟರ್‌ ಪಡೆದುಕೊಂಡು ಊರಿಗೆ ವಾಪಾಸ್ಸಾಗಲು ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು, ಜನದಟ್ಟಣೆ, ವಾಹನದಟ್ಟಣೆಯ ನಗರದಿಂದ ಎಲ್ಲಿಯೂ ಸಣ್ಣ ಅಪಘಾತವೂ ಆಗದಂತೆ ಸಾಗಿದರೂ ಆವರಗೆರೆ ಗ್ರಾಮದ ಹಾದು ಹೊರಟಿದ್ದಾನೆ.ಆವರಗೆರೆಯ ಬಳಿ ಟಾಟಾ ಮೋಟಾರ್ಸ್‌ನ ಆದಿಶಕ್ತಿ ಶೋ ರೂಂ ಮುಂದೆ ಸಾಲು ಸಾಲಾಗಿ ನಿಲ್ಲಿಸಿದ್ದ ಹೊಸ ಕಾರುಗಳು, ಸರ್ವೀಸ್‌ಗೆ ಬಂದಿದ್ದ ಕಾರುಗಳಿಗೆ ಟ್ರಾಕ್ಟರನ್ನು ಗುದ್ದಿಸಿ, 5 ಕಾರುಗಳು ಜಖಂಗೊಳ್ಳುವಂತೆ ಮಾಡಿದ್ದಾನೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ, ಅಪಾಯ ಆಗದಿದ್ದರೂ, ಕಾರುಗಳಂತೂ ಸಾಕಷ್ಟು ಜಖಂ ಆಗಿವೆ. ಐದೂ ಕಾರುಗಳ ಡೋರ್‌, ಬ್ಯಾನೆ
ಟ್‌, ಸಿಗ್ನಲ್ ಲೈಟ್ಸ್‌, ಗಾಜುಗಳು, ಬ್ರೇಕಿಂಗ್ ಲೈಟ್ಸ್‌ಗಳ ಭಾಗ, ಡಿಕ್ಕಿ ಜಖಂಗೊಂಡಿವೆ.
ತಕ್ಷಣವೇ ಶೋ ರೂಂ ಸಿಬ್ಬಂದಿ ಕಾರುಗಳಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆಸಿದ ಚಾಲಕ ರುದ್ರೇಶನಿಗೆ ಹಿಡಿದು, ಧರ್ಮದೇಟು ನೀಡಿದ್ದಾರೆ. ಮೈಮೇಲೆ ಪ್ರಜ್ಞೆ ಇಲ್ಲದವನಂತೆ ಅಮಲಿನಲ್ಲಿ ತೇಲಾಡುತ್ತಿದ್ದ ರುದ್ರೇಶನನ್ನು ಪೊಲೀಸರಿಗೆ ಫೋನ್ ಮಾಡಿ, ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆದಿಶಕ್ತಿ ಮೋಟಾರ್ಸ್‌ ಮುಂದೆ ಸರ್ವೀಸ್‌ಗೆ ವಾಹನ ತಂದಿದ್ದ ಮಾಲೀಕರು ತಮ್ಮ ವಾಹನದ ಸ್ಥಿತಿ ಕಂಡು ಕಕ್ಕಾಬಿಕ್ಕಿಯಾಗಿದ್ದಾರೆ. ಕೆಲವರು ಆಗಷ್ಟೇ ಕಾರನ್ನು ತಂದು, ನಿಲ್ಲಿಸಿದವರು, ಈಗಾಗಲೇ ಸರ್ವೀಸ್ ಆಗಿದ್ದ, ಆಗಬೇಕಿದ್ದ ವಾಹನಗಳು ಜಖಂಗೊಂಡಿವೆ. ಘಟನೆಯಲ್ಲಿ ಸುಮಾರು 2 ಲಕ್ಷ ರು.ಗಳಿಗೂ ಅದಿಕ ನಷ್ಟವಾಗಿದೆ ಎಂಬುದಾಗಿ ತಿಳಿದು ಬಂದಿದೆ. ಸದ್ಯಕ್ಕೆ ಅಮಲಿ
ನಲ್ಲಿ ತೇಲುತ್ತಿದ್ದ ಟ್ರ್ಯಾಕ್ಟರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು, ಮುಂದಿನ ಕ್ರಮ ಕೈಗೊಂಡಿದ್ದಾರೆಂದು ಗೊತ್ತಾಗಿದೆ.