ಪೊಲೀಸ್ ಚಿಣ್ಣರ ಅಂಗಳಕ್ಕೆ ಎಸ್ಪಿ ಚಾಲನೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.31; ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ, ಮೌಲ್ಯಯುತ ಶಿಕ್ಷಣ ನೀಡುವ ಉದ್ದೇಶದಿಂದ ಪೊಲೀಸ್ ಚಿಣ್ಣರ ಅಂಗಳ ಪ್ರಾರಂಭಿಸಲಾಗಿದೆಎಂದು ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.ನಗರದ ಜಿಲ್ಲಾ ಪೋಲೀಸ್ ವಸತಿ ಗೃಹದ ಬಳಿ ಇರುವ ಪೊಲೀಸ್ ಚಿಣ್ಣರ ಅಂಗಳ ಶಾಲಾ ಉದ್ಘಾಟನಾ ಸಮಾರಂಭದಲ್ಲಿ ಪೊಲೀಸ್ ಚಿಣ್ಣರ ಅಂಗಳ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಇದ್ದಂತಹ ಶಾಲೆಯನ್ನು ಸ್ಥಳಾಂತರಿಸಿ ಪುನರ್ ಜೀವನಗೊಳಿಸಲಾಗಿದೆ ಎಂದರು.ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಉದ್ದೇಶದಿಂದ ಕರ್ನಾಟಕ ಪೊಲೀಸ್ ಕಲ್ಯಾಣ ಮತ್ತು ಶಿಕ್ಷಣ ಟ್ರಸ್ಟ್ ನಿಂದ ಶಾಲೆ ಪ್ರಾರಂಭಿಸಲಾಗಿದೆ.‌ ಈವರೆಗೆ ಮೂವತ್ತು ಮಕ್ಕಳು ಪ್ರವೇಶ ಪಡೆದಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿ. ಮಂಜುನಾಥ್, ವಿಜಯಕುಮಾರ್ ಎಂ. ಸಂತೋಷ್,  ಪ್ರಶಾಂತ್ ಸಿದ್ದನಗೌಡ, ಸಂಗೀತಾ ತ್ಯಾಗರಾಜನ್, ಪಲ್ಲವಿ ಪತ್ತಾರ್ ಇತರರು ಇದ್ದರು.