ಗೀತಾ ಮನೀಷಿ ಮಹಾಮಂಡಲೇಶ್ವರ ಸ್ವಾಮಿ ಜ್ಞಾನಾನಂದ ಜೀ ಅಭಿಮತ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.31:- ಸ್ವಸ್ಥ ಸಮಾಜವನ್ನು ನಿರ್ಮಾಣಕ್ಕೆ ಭಗವಾನ್ ಶ್ರೀಕೃಷ್ಣರೇ ನೀಡಿರುವ ಒಂದು ಸಿದ್ದಾಂತ ಅಥವಾ ಪರಿಹಾರಗಳ ಗಂಟು ಭಗವದ್ಗೀತೆಯಾಗಿದೆ ಎಂದು ಗೀತಾ ಮನಿಷಿ ಮಹಾಮಂಡಲೇಶ್ವರ ಸ್ವಾಮಿ ಜ್ಞಾನಾನಂದ ಜಿ ತಿಳಿಸಿದ್ದಾರೆ.
ಮೈಸೂರು ಪುರಭವನದಲ್ಲಿ ಪುಷ್ಪಾಂಜಲಿ ಮತ್ತು ಅಗರ್ವಾಲ್ ಸಮಾಜದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ದಿವ್ಯ ಗೀತಾ ಸತ್ಸಂಗ ಪ್ರವಚನ
ನೀಡಿದ ಅವರು ಭಗವದ್ಗೀತೆ ಒಂದು ಧರ್ಮ, ಜಾತಿ ಹಾಗೂ ಉಪಸನ ಪದ್ದತಿಯನ್ನು ಮೀರಿ ಚರಾಚರ ಸೃಷ್ಟಿಯ ಬಗ್ಗೆ ಪ್ರಪಂಚದ ಎಲ್ಲಾ ಜೀವಿಗಳ ಬಗ್ಗೆ ಚಿಂತನೆ ಮಾಡಿರುವ ಒಂದು ಸಿದ್ಧಾಂತ ಅಥವಾ ಪರಿಹಾರಗಳ ಗಂಟಾಗಿದೆ ಎಂದರು, ಭಗವದ್ಗೀತೆಯಲ್ಲಿ ವ್ಯಕ್ತಿ, ತನ್ನಲ್ಲಿರುವ ದೋಷಗಳನ್ನು ಮೀರಿ, ತನ್ನಲ್ಲಿ ಉತ್ತಮ ಗುಣಗಳಿಂದಾಗಿ ಸಮಾಜದಲ್ಲಿ ತನ್ನನ್ನು ಗುರುತಿಸಿಕೊಳ್ಳುವ ಪ್ರಯತ್ನ ಮಾಡುವ ಬಗ್ಗೆ ಶ್ರೀ ಕೃಷ್ಣರು ತಿಳಿಸಿದ್ದಾರೆ, ಅರ್ಜುನ ಕೃಷ್ಣನನ್ನು ಕೇಳಿರುವ ಅನೇಕ ಪ್ರಶ್ನೆಗಳು ಮನುಷ್ಯನ ವಿಕಾಸದ ಆದಿಯನ್ನು ಹುಡುಕುವ ಒಂದು ವೈಜ್ಞಾನಿಕ ಪ್ರಯೋಗವೇ ಆಗಿದೆ, ವ್ಯಾಪಾರಿ, ವಿಜ್ಞಾನಿ, ವೈದ್ಯ, ಇಂಜಿನಿಯರ್, ರಾಜಕಾರಣಿ ಸೇಲ್ದಂತೆ ಸಮಾಜದ ಎಲ್ಲಾ ವರ್ಗದ ಜನರಿಗೆ ನಿರಂತರ ಮಾರ್ಗದರ್ಶನ ನೀಡುತ್ತಿರುವ ಒಂದು ಮನೋವೈಜ್ಞಾನಿಕ ಸಿದ್ಧಾಂತವು ಆಗಿದೆ ಎಂದು ಹೇಳಿದರು
ವ್ಯಕ್ತಿ ತನಗೇನು ದೊರೆಯಿತು ಎಂದು ಯೋಚನೆ ಮಾಡುವ ಬದಲಾಗಿ, ನಾನು ಸಮಾಜಕ್ಕೆ ದೇಶಕ್ಕೆ ಏನು ಕೊಡಬಲ್ಲೆ ಎಂಬ ಬಗ್ಗೆ ನಿರಂತರವಾಗಿ ಚಿಂತಿಸುವ ಒಂದು ಪ್ರೇರಣೆ ಭಗವದ್ಗೀತೆಯಲ್ಲಿನ ಭಗವಂತನ ಮಾತುಗಳಿಂದ ನಿರಂತರವಾಗಿ ದೊರಕುತ್ತದೆ, ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ಸ್ವಾತಂತ್ರ್ಯದ ಹೋರಾಟಗಾರರಿಗೂ ಭಗವದ್ಗೀತೆ ಪ್ರೇರಣೆ, ತಿಲಕರು ಗೀತಾ ರಹಸ್ಯ ಎಂಬ ಪುಸ್ತಕವನ್ನು ಬರೆದರೆ, ಲಾಲಾ
ಲಜಪತರಾಯರು ಸಹ ಭಗವದ್ಗೀತೆಯ ವಿಶ್ಲೇಷಣೆಯುಳ್ಳ, ಒಂದು ಪುಸ್ತಕವನ್ನು ಬರೆದಿದ್ದಾರೆ, ಉಳಿದಂತೆ ಭಗತ್ ಸಿಂಗ್, ರಾಮಪ್ರಸಾದ್ ಬಿಸ್ಮಿಲ್ ಮುಂದಾದ ಅನೇಕ ಹೋರಾಟಗಾರರು ತಮ್ಮ ಕೈಯಲ್ಲಿ ಭಗವದ್ಗೀತೆಯನ್ನು ಹಿಡಿದುಕೊಂಡೆ ನೇಣು ಗಂಬವನ್ನೇರಿದನ್ನು, ನಾವು ಕಂಡಿದ್ದೇವೆ ಎಂದರು, ಇಡೀ ಪ್ರಪಂಚದಲ್ಲಿ ಎಲ್ಲಾ ಕಡೆ ಯುದ್ಧದ ವಾತಾವರಣ ನೋಡುತ್ತಿರುವ ನಾವುಗಳು ಭಗವದ್ಗೀತೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ, ಒಂದು ರಾಮ ಮಂದಿರ ನಿರ್ಮಾಣದಿಂದ ಈ ದೇಶದಲ್ಲಿ ಸ್ವಾಭಿಮಾನದ ವಾತಾವರಣ ಪ್ರಾರಂಭವಾಗಿದೆ, ಇದು ಮುಂದುವರಿಯಬೇಕು , ಅದಕ್ಕಾಗಿ ಎಲ್ಲರೂ ಕೃಷ್ಣಭಕ್ತರಾಗೋಣ ಎಂದು ಆಶಿಸಿದರು,
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಗೋ ಮಧುಸೂದನ್, ಚಿಂತಾಮಣಿ ಮಾತೃಪೂರಿ ಆಶ್ರಮದ ಚೈತನ್ಯ ಮಾಹಿ ದೇವಿ, ಅಖಿಲ ಭಾರತ ಅಗರ್ವಾಲ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಮಿತ್ತಲ್, ಡಾ.ಮಿತ್ತಲ್, ಮೈಸೂರು ಅಗರ್ವಾಲ್ ಸಮಾಜದ ಅಧ್ಯಕ್ಷ ಕೃಷ್ಣ ಮಿತ್ತಲ್, ಸಮಾಜ ಸೇವಕ ಬನ್ನೂರು ಡಾ. ಮಹೇಂದ್ರ ಸಿಂಗ್ ಕಾಳಪ್ಪ, ಸವಿತಾ ಘಾಟ್ಕೆ, ಹಾಗೂ ಇನ್ನಿತರರು ಹಾಜರಿದ್ದರು