ಮಕ್ಕಳಿಗೆ ಹಸಿರು ಚಪ್ಪರ ತೋರಣ ಸ್ವಾಗತ
ಸಂಜೆವಾಣಿ ನ್ಯೂಸ್
ನಂಜನಗೂಡು.ಮೇ.31:- ನಂಜನಗೂಡು ನಾಳೆಯಿಂದ 2024 25ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ ಬೆಳಗ್ಗೆ 11 ಗಂಟೆಗೆ ಈ ಸಾಲಿಗೆ ಆಗಮಿಸುವ ಎಲ್ಲ ನೆಚ್ಚಿನ ಪ್ರೀತಿಯ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಸಲುವಾಗಿ ಶಾಲೆಯ ಮುಂಭಾಗ ಹಸಿರು ಚಪ್ಪರ ಹಾಕಿ ಸ್ವಾಗತಿಸುವ ಸಿದ್ಧತೆ ನಡೆದಿದೆ
ಪಟ್ಟಣದ ಹಳ್ಳದಕೇರಿ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿದೆ ರಜೆ ಮುಗಿಸಿ ನಾಳೆಯಿಂದ ಶಾಲೆಗೆ ಮಕ್ಕಳು ಬರುವ ದೃಷ್ಟಿಯಿಂದ ಬಂದಂತ ಮಕ್ಕಳಿಗೆ ಗುಲಾಬಿ ಹೂವನ್ನು ನೀಡಿ ಸ್ವಾಗತ ಮಾಡಲಾಗುತ್ತದೆ ಎಂದು ಶಿಕ್ಷಕ ಸತೀಶ್ ತಿಳಿಸಿದರು
ಹಳ್ಳದಕೇರಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಸ್ ಡಿ ಎಂ ಸಿ ಮತ್ತು ಸಹಶಿಕ್ಷಕ ವೃಂದ ಮತ್ತು ಪ್ರೀತಿಯ ವಿದ್ಯಾರ್ಥಿಗಳು.