ಜೂ.4ಕ್ಕೆ ಲೋಕಸಭಾ ಮತ ಎಣಿಕೆ ಗೆ ಸಜ್ಜು
ಸಂಜೆವಾಣಿ ನ್ಯೂಸ್
ಮೈಸೂರು.ಮೇ.31:- 2024ರ ಲೋಕಸಭಾ ಚುನಾವಣೆಯ ಮಹಾ ಕದನದ ಮತ ಎಣಿಕೆ ಕಾರ್ಯವು ಜೂ.4ರಂದು ಬೆಳಗ್ಗೆ 8ಕ್ಕೆ ನಗರದ ಮಹಾರಾಣಿ ಕಾಲೇಜಿನಲ್ಲಿ ನಡೆಯಲಿದ್ದು, ಅದಕ್ಕೆ ಪೂರಕವಾಗಿ ಜಿಲ್ಲಾಡಳಿದಿಂದ ಸಕಲ ಸಿದ್ಧತೆ ನಡೆಸಲಾಗಿದೆ.
ನಗರದ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಅಂಚೆ ಮತ ಎಣಿಕೆಗೆ ಸಂಬಂಧಿಸಿದಂತೆ ಲೋಕಸಭಾ ಮತ ಎಣಿಕೆ ಕೇಂದ್ರದಲ್ಲಿ 3 ಹಂತದಲ್ಲಿ ಭದ್ರತೆ ಒದಗಿಸಲಾಗಿದ್ದು, ಮೂರನೇ ಹಂತದ ಭದ್ರತೆಯ ವ್ಯಾಪ್ತಿಯ ನಂತರ ಕೊಠಡಿ ದ್ವಾರಗಳನ್ನು ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿದ್ದು, ಹೀಗಾಗಿ ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರು ಅಂದು ಬೆಳಿಗ್ಗೆ 7ಕ್ಕೆ ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಯ ಆವರಣಕ್ಕೆ ಬರಲು ಸೂಚನೆ ನೀಡಲಾಗಿದೆ. ಬೆಳಿಗ್ಗೆ 7.30ಕ್ಕೆ ಭದ್ರತಾ ಕೊಠಡಿಯ ಬಾಗಿಲನ್ನು ತೆರೆಯಲಾಗುವುದು. ಮತ ಎಣಿಕೆ ಸ್ಥಳದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ಚುನಾವಣಾ ಏಜೆಂಟರಿಗೆ ಹಾಗೂ ಮತ ಎಣಿಕೆ ಏಜೆಂಟರು ಪ್ರವೇಶಿಸಲು ಅವಕಾಶ ಇರಲಿದೆ ಎಂದು ಮಾಹಿತಿ ನೀಡಿದರು.
ಅಂಚೆ ಮತಪತ್ರಗಳ ಎಣಿಕೆ ಮತ್ತು ಕಂಟ್ರೋಲ್ ಯೂನಿಟ್ ಮೂಲಕ ಮತ ಎಣಿಕೆಯನ್ನು ಬೆಳಿಗ್ಗೆ 8 ಗಂಟೆಗೆ ಆರಂಭಿಸಲಾಗುವುದು. ಪ್ರತಿ ಮತ ಎಣಿಕೆ ಟೇಬಲ್‍ಗೆ ಒಬ್ಬ ಮೇಲ್ವಿಚಾರಕ, ಒಬ್ಬ ಸಹಾಯಕ ಮತ್ತು ಒಬ್ಬ ಮೈಕ್ರೋ ಅಬ್ಸರ್ವರ್ ನೇಮಕ ಮಾಡಿ ತರಬೇತಿ ಎರಡು ಹಂತದಲ್ಲಿ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಒಂದು ಹಂತದ ತರಬೇತಿ ಮುಗಿದ್ದಿದ್ದು, ಜೂ.1ರಂದು ತರಬೇತಿ ಪೂರ್ಣಗೊಳ್ಳಲಿದೆ ಎಂದರು.
ಮತ ಎಣಿಕೆ ಎಲ್ಲ ಅಭ್ಯರ್ಥಿಗಳು ಟೇಬಲ್‍ಗೆ ಒಬ್ಬರಂತೆ ಎಣಿಕೆ ಏಜೆಂಟರನ್ನು ನೇಮಿಸಬಹುದು. ಈ ಏಜೆಂಟರು ಮತ ಎಣಿಕೆ ಕೇಂದ್ರದಲ್ಲಿ ಅವರಿಗೆ ನಿಯೋಜಿಸಿರುವ ಸ್ಥಳದಲ್ಲಿ ಕುಳಿತುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಒಂದು ಟೇಬಲ್‍ಗೆ ಅಭ್ಯರ್ಥಿಯ ಓರ್ವ ಏಜೆಂಟ್‍ಗೆ ಇರಲು ಅವಕಾಶವಿದೆ. ವಿವಿಪ್ಯಾಟ್‍ಗಳನ್ನು ಆಯ್ಕೆ ಮಾಡಿ ಎಣಿಕೆ ಮಾಡಲಾಗುವುದು. ಮತ ಎಣಿಕೆ ಹಾಲ್‍ನಲ್ಲಿ ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ನಿರ್ಬಂಧಿಸಲಾಗಿದೆ. ಮತ ಎಣಿಕೆ ಆವರಣದ ಸುತ್ತ ಸೆಕ್ಷನ್ 144 ಜಾರಿಗಳಿಸಲಾಗಿದೆ ಎಂದು ತಿಳಿಸಿದರು.
ಇವಿಎಂ ಮತ ಎಣಿಕೆ ಮತ್ತು ಅಂಚೆ ಮತ ಪತ್ರ, ಇಟಿಪಿಬಿಎಂಎಸ್ ಮತ ಎಣಿಕೆ ಕಾರ್ಯಕ್ಕೆ ಮೀಸಲು ಸಿಬ್ಬಂದಿ ಸೇರಿದಂತೆ ಒಟ್ಟು 160 ಮತ ಎಣಿಕೆ ಮೇಲ್ವಿಚಾರಕರು, 187 ಮತ ಎಣಿಕೆ ಸಹಾಯಕರು ಮತ್ತು 171 ಮತ ಎಣಿಕೆ ಮೈಕ್ರೋ ಅಬ್ಸರ್‍ವರ್‍ಗಳನ್ನು ನೇಮಕ ಮಾಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 20,92,222 ಮತದಾರರಿದ್ದು, 1477571 ಮತದಾನ ಮಾಡಿ ಶೇ.70.62ರಷ್ಟು ಮತದಾನವಾಗಿದೆ. ಸೇವಾ ಮತದಾರರ ಅಂಚೆ ಮತಪತ್ರದಲ್ಲಿ 2088 ಹಂಚಿಕೆ ಮಾಡಿದ್ದು, 1012 ಮಂದಿಯಿಂದ ಸ್ವೀಕೃತವಾಗಿದೆ. ಅಂದು ಬೆಳಗ್ಗೆ 8ಗಂಟೆಯ ತನಕವೂ ಸ್ವೀಕೃತವಾಗುವ ಅಂಚೆ ಮತಪತ್ರಗಳನ್ನು ಎಣಿಕೆಗೆ ಪರಿಗಣಿಸಲಾಗುವುದು. ನಂತರ ಬಂದಿದ್ದನ್ನು ಪರಿಗಣಿಸಲ್ಲ ಎಂದರು.
ಇದೇ ರೀತಿ 85 ವರ್ಷ ಮೇಲ್ಪಟ್ಟವರು, ಪಿಡಬ್ಲ್ಯೂಡಿ ಮತದಾರರು, ಎವಿಇಎಸ್ ಮತದಾರರು 8902 ಇದ್ದು,ಅದರಲ್ಲಿ 7594 ಮತ ಚಲಾವಣೆಯಾಗಿದೆ ಎಂದು ವಿವರಿಸಿದರು. ನೆಲಮಹಡಿಯ ಕೊಠಡಿ-11ರಲ್ಲಿ ಹುಣಸೂರು, ಮೊದಲನೇ ಮಹಡಿ 103ರಲ್ಲಿ ಚಾಮರಾಜ, 111ರಲ್ಲಿ ಕೃಷ್ಣರಾಜ, 120ರಲ್ಲಿ ಚಾಮುಂಡೇಶ್ವರಿ, 126ರಲ್ಲಿ ಪಿರಿಯಾಪಟ್ಟಣ, ಎರಡನೇ ಮಹಡಿಯ ಕೊಠಡಿ ಸಂಖ್ಯೆ 203ರಲ್ಲಿ ವಿರಾಜಪೇಟೆ, 211ರಲ್ಲಿ ಮಡಿಕೇರಿ, 218ರಲ್ಲಿ ನರಸಿಂಹರಾಜ ಕ್ಷೇತ್ರ, 220ರಲ್ಲಿ ಅಂಚೆಮತಪತ್ರಗಳು, 220(2)ರಲ್ಲಿ ಇಟಿಪಿಬಿಎಂಎಸ್ ಮತಗಳ ಎಣಿಕೆ ನಡೆಯಲಿದೆ. ಎಲ್ಲಾ ಇವಿಎಂ ಗಳ ಎಣಿಕೆ ಕಾರ್ಯ ಮುಗಿದ ಬಳಿಕ 5 ವಿವಿ ಪ್ಯಾಟ್‍ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಆಯ್ಕೆಯಾದ ವಿವಿ ಪ್ಯಾಟ್‍ಗಳ ಸ್ಲಿಪ್‍ಗಳನ್ನು ಎಣಿಕೆ ವಾಡಲಾಗುವುದು ಎಂದು ಹೇಳಿದರು.
ಪಾಲಿಕಸಬೇಕಾದ ಸೂಚನೆಗಳು: ಪ್ರತಿ ಎಣಿಕೆ ಏಜೆಂಟರಿಗೆ ನೀಡಿರುವ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಕಡ್ಡಾಯ ಧರಿಸಿಕೊಂಡಿರಬೇಕು. ಪಾಸ್ ತೆಗೆದುಕೊಂಡು ಬರದೇ ಹೋದರೆ ಅಂತಹ ಏಜೆಂಟರನ್ನು ಮತ ಎಣಿಕೆ ಕೇಂದ್ರದ ಒಳಗಡೆ ಬಿಡುವುದಿಲ್ಲ. ಈ ಶಿಸ್ತನ್ನು ಪಾಲಿಸದೇ ಇರುವ ಏಜೆಂಟರನ್ನು ಯಾವುದೇ ಸಂದರ್ಭದಲ್ಲಿಯೂ ಚುನಾವಣಾಧಿಕಾರಿ ಯಾವುದೇ ಪೂರ್ವ ಮನ್ಸೂಚನೆ ನೀಡದೆ ಹೊರಗೆ ಹಾಕಲಾಗುವುದು. ಮೊಬೈಲ್ ಫೆÇೀನ್‍ಗಳಿಗೆ ಅವಕಾಶ ಇರುವುದಿಲ್ಲ, ಮೊಬೈಲ್ ಫೆÇೀನ್‍ಗಳನ್ನು ಸಂಗ್ರಹಣಾ ಕೌಂಟರ್‍ನಲ್ಲಿ ಇರಿಸಬೇಕು ಎಂದರು.
ನಗರ ಪೆÇಲೀಸ್ ಆಯುಕ್ತ ರಮೇಶ್ ಬಾನೋತ್ ಮಾತನಾಡಿ, ಮತ ಎಣಿಕೆ ಕೇಂದ್ರಕ್ಕೆ ಕತ್ತರಿ, ಚಾಕು ಇನ್ನಿತರ ಹರಿತವಾದ ವಸ್ತುಗಳು, ಬೆಂಕಿ ಹಾಗೂ ಸ್ಪೋಟಕ ಸಾಮಗ್ರಿಗಳಿಗೆ ಅವಕಾಶವಿಲ್ಲ. ಪ್ರಚೋದನಕಾರಿ ಭಾಷಣಕ್ಕೆ ನಿಷೇಧ, ಧ್ವನಿ ವರ್ಧಕ, ಡಿಜೆ ಉಪಯೋಗಿಸುವುದು ಮತ್ತು ಬೈಕ್ ರ?ಯಾಲಿ ನಿಷೇಧಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ 100 ಮೀಟರ್ ಅಂತರದಲ್ಲಿ ಮೊಬೈಲ್ ಫೆÇೀನ್, ಕಾಡ್ರ್ಲೆಸ್ ಫೆÇೀನ್ ಅಥವಾ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಿದೆ. ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು, ಸಿಬ್ಬಂದಿ, ಅಭ್ಯರ್ಥಿಗಳು, ಚುನಾವಣಾ ಏಜೆಂಟ್, ಎಣಿಕೆ ಏಜೆಂಟ್‍ಗಳನ್ನು ಹೊರತು ಪಡಿಸಿ ಅನಾಧಿಕೃತ ವ್ಯಕ್ತಿಗಳು ಪ್ರವೇಶಿಸುವಂತಿಲ್ಲ. ಗೆದ್ದ ಅಭ್ಯರ್ಥಿಗಳ ವಿಜಯೋತ್ಸವ ಮೆರವಣಿಗೆ ನಿಷೇಧಿಸಲಾಗಿದೆ ಎಂದರು.
ಕಳೆದ ಬಾರಿ ಸಾರ್ವಜನಿಕರಿಗೆ ಪ್ರವೇಶ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಈ ಬಾರಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಅವಕಾಶವಿದೆ. ಕಲಾಮಂದಿರದಿಂದ ಹುಣಸೂರು ರಸ್ತೆಯ ಕೆಎಸ್‍ಓಯು ಸಿಗ್ನಲ್‍ವರೆಗೆ, ಲೀಲಾಚೆನ್ನಯ್ಯ ಕಲ್ಯಾಣ ಮಂಟಪದವರೆಗೂ ವಾಹನ ಸಂಚಾರ ನಿಷೇಧಿಸಲಾಗುತ್ತಿದೆ. ಹೀಗಾಗಿ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗುವುದು ಎಂದರು.
ಡಿಸಿಪಿ ಮುತ್ತುರಾಜ್, ಸಂಚಾರ ವಿಭಾಗದ ಡಿಸಿಪಿ ಜಾಹ್ನವಿ, ಜಿಪಂ ಸಿಇಓ ಪೂರ್ಣಿಮಾ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.