ಮಹಾವೀರ್ ಜೈನ್ ಶಾಲೆಗೆ ಬೀಗ ಜಡಿಯಲು ದಸಂಸ ಒತ್ತಾಯ
ಕೆಜಿಎಫ್.ಮೇ.೩೧- ಶಾಲೆ ನಡೆಸಲು ಅನುಮತಿ ಪಡೆದು ಅನಧಿಕೃತವಾಗಿ ಮಕ್ಕಳನ್ನು ಹೆಚ್ಚುವರಿಯಾಗಿ ದಾಖಲು ಮಾಡಿಕೊಂಡಿರುವ ಮಹಾವೀರ್ ಜೈನ್ ಶಾಲೆಗೆ ನೀಡಲಾಗಿರುವ ಅನುಮತಿಯನ್ನು ರದ್ದುಪಡಿಸುವಂತೆ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೋಲಾರ ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕರಾದ ಕೃಷ್ಣಮೂರ್ತಿ ನಗರದ ರಾಬರ್ಟ್‌ಸನ್‌ಪೇಟೆಯಲ್ಲಿರುವ ಮಹಾವೀರ್ ಜೈನ್ ಹಲವು ವರ್ಷಗಳಿಂದ ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದು ಶಾಲಾ ಆಡಳಿತ ಮಂಡಳಿ ೧ ರಿಂದ ೭ ನೇ ತರಗತಿಗೆ ಅನುಮತಿ ಪಡೆದಿರುವುದು ಪ್ರತಿ ತರಗತಿಗೆ ೪೦ ಮಕ್ಕಳನ್ನು ದಾಖಲು ಮಾಡಲು ಹಾಗೂ ೮ ರಿಂದ ೧೦ ನೇ ತರಗತಿಯವರೆಗಿನ ತರಗತಿಗೆ ಪ್ರತಿ ತರಗತಿಗೆ ೭೦ ವಿಧ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಒಟ್ಟು ಸರಿ ಸುಮಾರು ೭೦೦ ವಿಧ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಅನುಮತಿ ಪಡೆಯಲಾಗಿದೆ ಆದರೆ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿರುವ ಶಾಲಾ ಆಡಳಿತ ಮಂಡಳಿ ಹಲವು ತರಗತಿಗಳನ್ನು ಮುನ್ನೆಡೆಸುತ್ತಿದ್ದಾರೆ ಮತ್ತು ಖಾಸಗಿ ಕಲ್ಯಾಣ ಮಂದಿರದಲ್ಲಿ ಯಾವುದೆ ಭದ್ರತಾ ವ್ಯವಸ್ಥೆಗಳು ಇಲ್ಲದ ಸ್ಥಳದಲ್ಲಿ ಎಲ್‌ಕೆಜಿ ತರಗತಿಗಳನ್ನು ಮಾಡಲಾಗುತ್ತಿದೆ ಆಗ್ನಿಅನಾಹುತ ನಡೆದರೆ ಯಾರು ಜಾವಾದ್ಬರಿ ಅದರ ಹೊಣೆಯನ್ನು ಯಾರು ಹೊರಲಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಸರ್ಕಾರಿ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿರುವ ಜೈನ್ ಶಾಲಾ ಆಡಳಿತ ಮಂಡಳಿ ವಿರುದ್ದ ಬೃಹುತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಈ ವೇಳೆ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ಲಕ್ಷ್ಮಯ್ಯ ಹಾಜರಿದ್ದರು.