ತಂಬಾಕಿನಿಂದ ಮಕ್ಕಳನ್ನ ರಕ್ಷಿಸಿ: ನ್ಯಾ. ಮಂಜುನಾಥ್ ಕರೆ
ಕೋಲಾರ,ಮೇ,೩೧- ಸುಸ್ಥಿರ ಸಮಾಜ ನಿರ್ಮಾಣಕ್ಕೆ ಸುಸ್ಥಿರ ಅರೋಗ್ಯವು ಮುಖ್ಯವಾಗಿದೆ, ಅರೋಗ್ಯವನ್ನು ಸಧೃಡತೆಯಿಂದ ಕಾಪಾಡಿ ಕೊಳ್ಳಲು ನಮ್ಮನ್ನು ನಾವು ನಿಗ್ರಹಿಸಿ ಕೊಳ್ಳುವಂತಾಗ ಬೇಕು ಎಂದು ಜಿಲ್ಲಾ ಸತ್ರ ಸೆಷನ್ ನ್ಯಾಯಾಧೀಶರಾದ ಮಂಜುನಾಥ್ ಕರೆ ನೀಡಿದರು,
ನಗರದ ಜಿಲ್ಲಾ ಸರ್ಕಾರಿ ಎಸ್.ಎನ್.ಆರ್ ಆಸ್ಪತ್ರೆಯಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಕಾನೂನು ಅರಿವು ನೆರವು ಪ್ರಾಧಿಕಾರ ಮತ್ತು ಜಿಲ್ಲಾ ನರ್ಸ್ಸಿಂಗ್ ತರಭೇತಿ ಕಾಲೇಜು ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಜನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ಸಂರಕ್ಷಿಸುವಂತಾಗ ಬೇಕು,ತಂಬಾಕು ಉತ್ಪನ್ನದಲ್ಲಿ ಮತ್ತು ಅಮದು,ರಪ್ತುಗಳಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ತಂಬಾಕು ಉತ್ಪನ್ನವನ್ನು ಕೃಷಿಯನ್ನಾಗಿ ಪರಿಗಣಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಉತ್ತಮ ಅದಾಯವಿದೆ ಎಂಬುವುದನ್ನು ಅಲ್ಲಗೆಳೆಯಲಾಗದು ಎಂದು ಹೇಳಿದರು,
ಪ್ರಕೃತಿಯು ನೀಡುವಂತ ಉತ್ತಮವಾದ ನೀರು, ಗಾಳಿ, ಆಹಾರಗಳಿಂದ ನಾವು ಆರೋಗ್ಯವನ್ನು ಕಾಪಾಡಿ ಕೊಳ್ಳ ಬಹುದಾಗಿದೆ. ಅದರೆ ನಾವು ಇಂದು ಹಣವನ್ನು ನೀಡಿ ಕೃತಕ ಆಹಾರ, ಗಾಳಿ, ನೀರು ಸೇವನೆ ಮಾಡುತ್ತಿರುವುದರಿಂದ ನಮ್ಮ ಆರೋಗ್ಯವನ್ನು ನಾವು ಹಾಳು ಮಾಡಿ ಕೊಳ್ಳುತ್ತಿದ್ದೇವೆ ಎಂದರು,
ಇಂದು ೧೫-೧೬ನೇ ವರ್ಷದ ಬಾಲಕರು ದುಷ್ಚಟಗಳಿಗೆ ಬಲಿಯಾಗುತ್ತಿರುವುದು ಹೆಚ್ಚಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕರು ಉಪನ್ಯಾಸಕರು ಹೆಚ್ಚಿನ ನಿಗವಹಿಸಿ ದುಷ್ಟಟಗಳಿಗೆ ಬಲಿಯಾಗದಂತೆ ಅವರಿಗೆ ಶಿಕ್ಷಣದ ಜೂತೆಗೆ ನೀತಿ ಪಾಠಗಳನ್ನು ಮಾಡುವಂತಾಗ ಬೇಕು. ಪೋಷಕರು ತಮ್ಮ ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನ ಹರಿಸ ಬೇಕೆಂದು ಕಿವಿ ಮಾತು ಹೇಳಿದರು,
ಶಾಲಾ.ಕಾಲೇಜುಗಳ ಬಳಿ ಇರುವಂತ ಅಂಗಡಿಗಳಲ್ಲಿ ಬೀಡಿ, ಸಿಗರೇಟ್, ಗುಟ್ಕಾ, ಇತ್ಯಾದಿಗಳು ಸುಲಭವಾಗಿ ಸಿಗುತ್ತಿರುವುದರ ಬಗ್ಗೆ ಎಚ್ಚರ ವಹಿಸಿ ಕಾನೂನು ಉಲ್ಲಂಘನೆ ವಿರುದ್ದ ದೂರು ನೀಡಿ ಕ್ರಮ ವಹಿಸ ಬೇಕಾಗಿದೆ ಎಂದು ತಿಳಿಸಿದರು,
ಇದಕ್ಕೂ ಮುನ್ನ ಜಿಲ್ಲಾ ಹಿರಿಯ ನ್ಯಾಯದೀಶರಾದ ಸುನೀಲ್ ಹೊಸಮನಿ ಅವರು ಪ್ರಮಾಣ ವಚನವನ್ನು ಬೋಧಿಸಿದರು,
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗದೀಶ್, ಡಾ. ಚಾರಣಿ, ಡಾ. ನಾರಾಯಣಸ್ವಾಮಿ, ಡಾ.ಚಂದ್ರ ಶೇಖರ್, ರೋಟರಿ ಮುನೇಗೌಡ ಮುಂತಾದವರು ಇದ್ದರು.
ಇದೇ ಸಂದರ್ಭದಲ್ಲಿ ನಗರದಲ್ಲಿ ಜಿಲ್ಲಾ ಎಸ್.ಎನ್.ಆರ್. ಆಸ್ಪತ್ರೆಯ ನರ್ಸಿಂಗ್ ತರಬೇತಿ ನಿದ್ಯಾರ್ಥಿಗಳು, ಆರ್.ಎಲ್.ಜಾಲಪ್ಪ ಆಸ್ಪತ್ರೆ, ಚನ್ನೆಗೌಡ ನರ್ಸ್ಸಿಂಗ್ ವಿದಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ಮೂಲಕ ಸಾರ್ವಜನಿಕರಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಅರಿವು ಮೋಡಿಸುವ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.