ಡಿ.ಟಿ.ಶ್ರೀನಿವಾಸ್ ಪ್ರಸಾದ್‌ಗೆ ಶೋಷಿತ ಸಮುದಾಯಗಳ ಒಕ್ಕೂಟ ಬೆಂಬಲ
ಕೋಲಾರ,ಮೇ,೩೧-ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಜೂ ೩ ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರಿಗೆ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಬೆಂಬಲಿಸಲಿದೆ ಎಂದು ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳು ಮೈತ್ರಿ ಮಾಡಿ ಕೊಂಡು ಕಾಂಗ್ರೇಸ್ ಪಕ್ಷಕ್ಕೆ ಸವಾಲ್‌ನಂತೆ ಪೈಪೋಟಿ ನೀಡುತ್ತಿರುವ ಚುನಾವಣೆಗೆ ಇಬ್ಬರು ಪ್ರಬಲ ಅಭ್ಯರ್ಥಿಗಳ ನಡುವೆ ಸ್ವರ್ಧೆ ನಡೆಯುತ್ತಿದೆ. ಈ ಮಧ್ಯೆ ಇಬ್ಬರು ಪಕ್ಷೇತರರ ಅಕಾಂಕ್ಷಿಗಳು( ಲೋಕೆಶ್ ತಾಳಿಕಟ್ಟೆ ಹಾಗೂ ಶಿವಪ್ರಸಾದ್) ಚುನಾವಣೆಯಲ್ಲಿ ಶಿಕ್ಷಕರನ್ನು ಅಮಿಷಕ್ಕೆ ಒಳಪಡೆಸಲು ಹಣ, ಗಿಫ್ಟ್ ನೀಡುವ ಮೂಲಕ ಒಲೈಸಿ ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಶಿಕ್ಷಕರು ಬಲಿಯಾಗದೆ ಮುಂದಿನ ಭವಿಷ್ಯತ್ತಿನ ಒಳಿತಿಗಾಗಿ ಗೆಲ್ಲುವ ಅಭ್ಯರ್ಥಿಯಾಗಿರುವ ಡಿ.ಟಿ. ಶ್ರೀನಿವಾಸ್ ಅವರನ್ನು ಬೆಂಬಲಿಸ ಬೇಕೆಂದು ಮನವಿ ಮಾಡಿದರು,
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆನಂತ ನಾಯಕ್ ಮಾತನಾಡಿ ನಮ್ಮ ಒಕ್ಕೂಟವು ನಿರಂತರ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದ್ದು ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಿತ್ತು. ಇದೇ ರೀತಿ ವಿಧಾನ ಪರಿಷತ್‌ನ ಚುನಾವಣೆಯಲ್ಲೂ ಪ್ರಚಾರದ ಕಾರ್ಯದಲ್ಲಿ ತೊಡಗಿಸಿ ಕೊಂಡಿದೆ. ರಾಮಚಂದ್ರಪ್ಪ ಅವರ ನೇತ್ರತ್ವದಲ್ಲಿ ಒಕ್ಕೂಟದ ಎಲ್ಲಾ ಸಮುದಾಯಗಳ ಮುಖಂಡರು ಸಭೆ ಸೇರಿ ಅಗ್ನೇಯ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ದಮನಿತರ, ಶೋಷಿತರ ಹಿಂದುಳಿದ ವರ್ಗಗಳ ಪರ ಇರುವಂತ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗೆ ಬೆಂಬಲಿಸಲು ಒಕ್ಕೂರಲಿನ ತೀರ್ಮಾನವನ್ನು ಕೈಗೊಂಡಂತೆ ರಾಜ್ಯದಲ್ಲಿ ನಡೆಯುತ್ತಿರುವ ಶಿಕ್ಷಕರ ಮತ್ತು ಪಧವೀದರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳ ಪರ ಬೆಂಬಲ ಸೂಚಿಸಲು ರಾಜ್ಯ ಪ್ರವಾಸವನ್ನು ಕೈಗೊಂಡಿದೆ ಎಂದು ತಿಳಿಸಿದರು,
ಸುದ್ದಿಗೋಷ್ಠಿಯಲ್ಲಿ ಮುಳಬಾಗಿಲು ಗೋಪಾಲ್, ಪ್ರಸಾದ್ ಬಾಬು, ವೆಂಕಟ ಸುಬ್ಬರಾವ್, ರಾಮಕೃಷ್ಣಪ್ಪ, ಸರಸ್ವತಮ್ಮ, ಪಾಲ್ಗುಣ, ಕಿಲಾರಿ ಪೇಟೆ ಮಣಿ, ಮುನಿಕೃಷ್ಣಪ್ಪ, ಪೊಲೀಸ್ ಅಶ್ವಥ್, ಯುವರಾಜ್, ಹರಟಿಗೋಪಾಲ್, ಯಲ್ಲಪ್ಪ, ವೆಂಕಟಶಿವಪ್ಪ, ಜಗಧೀಶ್, ಮುಂತಾದವರು ಉಪಸ್ಥಿತರಿದ್ದರು,