ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖ
ಕೋಲಾರ,ಮೇ,೩೧:ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಾಗಿದೆ. ಹಕ್ಕುಗಳ ಜೊತೆಗೆ ಕರ್ತವ್ಯದ ಜವಾಬ್ದಾರಿಯ ಕಡೆಯೂ ಗಮನ ಹರಿಸ ಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್ ಹೊಸಮನಿ ಅಭಿಪ್ರಾಯ ಪಟ್ಟರು,
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರ ಮಂಡಳಿ,ಆದರ್ಶ ಕಾಲೇಜು, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರ್ಪುವರಣ ಸಂರಕ್ಷಣಾ ಗತಿವಿಧಿ, ಕ್ಯಾನ್ ನೆಟ್ ವರ್ಕ್ ವೃಷಭಾಧ್ರಿ ಫೌಂಡೇಶನ್ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ-೨೦೨೪ ಅಂಗವಾಗಿ ಆಯೋಜಿಸಿದ್ದ ನಗರದ ನಾಗರ ಕಲ್ಯಾಣಿ (ನಾಗರ ಕುಂಟೆ) ಸ್ವಚ್ಚತಾ ಅಭಿಯಾನ ಕಾರ್ಯಕ್ಕೆ ಕಸವನ್ನು ಸ್ವಚ್ಚಗೊಳಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿ ಭಾರತದ ಸಂವಿಧಾನದಲ್ಲಿ ಮೂಲ ಭೂತ ಹಕ್ಕು ಅರ್ಟಿಕಲ್ ೫೧ಎ ಬಗ್ಗೆ ಎಲ್ಲರೂ ಮಾತನಾಡುತ್ತಾರೆ ಅದರೆ ಅದೇ ರೀತಿ ಕರ್ತವ್ಯಗಳ ಬಗ್ಗೆ ಯಾರು ಮಾತನಾಡುವುದಿಲ್ಲ ಮೂಲಭೂತ ಹಕ್ಕುಗಳನ್ನು ಕೇಳುವಂತೆ ಜವಾಬ್ದಾರಿಗಳ ಕುರಿತು ಅರಿವು ಇರಬೇಕೆಂದರು.
ಕಾನೂನಿನ ಯೋಜನೆಗಳಲ್ಲಿ ರೂಪಿಸುವ ಪರಿಸರ ರಕ್ಷಣೆಯು ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿಯಾಗಿದೆ. ನೀರು, ಗಾಳಿ, ಆಹಾರ ಸೇರಿದಂತೆ ಸುತ್ತಮುತ್ತಲಿನ ಪರಿಸರಗಳನ್ನು ಶುದ್ದ ಹಾಗೂ ಸ್ವಚ್ಚವಾಗಿಟ್ಟು ಕೊಳ್ಳ ಬೇಕು, ಜಿಲ್ಲೆಯಲ್ಲಿ ಸುಮಾರು ೪೫೦೦ಕ್ಕೂ ಹೆಚ್ಚು ಕೆರೆಗಳಿದ್ದು ಅವುಗಳನ್ನು ರಕ್ಷಿಸಿ ಕೊಳ್ಳಬೇಕಾಗಿದೆ ಅದರೆ ಇಂದು ಕೆರೆ,ಕಾಲುವೆಗಳ ಒತ್ತುವರಿಗಳಿಂದಾಗಿ ಪರಿಸರಕ್ಕೆ ಧಕ್ಕೆಯುಂಟಾಗುತ್ತಿದೆ. ಗಿಡ ಮರಗಳ ಕಾಡು ಅರಣ್ಯಗಳನ್ನು ನಾಶ ಮಾಡುತ್ತಾ ಕಾಂಕ್ರಿಟ್ ನಗರವಾಗಿ ಮಾರ್ಪಡಾಗುತ್ತಿರುವುದು. ಇದರಿಂದ ಹವಮಾನದಲ್ಲಿ ಬದಲಾವಣೆಯಾಗುತ್ತಿರುವುದು ಕಳವಳಕಾರಿಯಾಗಿದೆ ಎಂದರು,
ಜೂನ್ ೫ ರಂದು ಪರಿಸರ ದಿನಾಚರಣೆಯನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಷರ ದಿನಾಚರಣೆಯನ್ನು ಆಚರಿಸ ಬೇಕು, ಇದರ ಜೊತೆಗೆ ಪರಿಸರವನ್ನು ಸ್ವಚ್ಚತೆಗೆ ಒತ್ತು ನೀಡ ಬೇಕು, ಸಸಿಗಳನ್ನು ಅರಣ್ಯ ಇಲಾಖೆಯ ಮೂಲಕ ಪಡೆದು ಕೊಳ್ಳ ಬೇಕು ಸಸಿಗಳನ್ನು ಪೋಷಿಸಲು ಅರಣ್ಯ ಇಲಾಖೆಯು ಪ್ರೋತ್ಸಾಹ ಧನ ನೀಡುವುದನ್ನು ಸದ್ಬಳಿಸಿ ಕೊಳ್ಳ ಬಹುದಾಗಿದೆ. ಕಳೆದ ವರ್ಷ ವಕ್ಕಲೇರಿ ಬೆಟ್ಟದಲ್ಲಿ ಪರಿಸರದ ಅರಿವು ಕಾರ್ಯಕ್ರಮವನ್ನು ರೂಪಿಸಿದ್ದನ್ನು ಸ್ಮರಿಸಿ ಕೊಂಡ ಅವರು ಇತ್ತೀಚೆಗೆ ಸುಪ್ರೀಂ ಕೋರ್ಟ್ ಸ್ವಚ್ಚತೆಯ ಜಾಗೃತಿಯ ಬಗ್ಗೆ ಯೋಜನೆಗಳನ್ನು ರೂಪಿಸಿ ಅನುಷ್ಟನಕ್ಕೆ ತರಲು ಸರ್ಕಾರಗಳಿಗೆ ಆದೇಶಿಸಿದೆ ಎಂದರು,
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಡಾ. ಕೆ.ರಾಜು ಪ್ರಸ್ತಾವಿಕ ನುಡಿಗಳಾಡಿದರು,
ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಬಾಬು, ಎನ್.ಜಿ.ಓ ಕೈವಾರದ ಮಲ್ಲಜಮ್ಮ, ಒರ್ಯವರಣ ಸಂರಕ್ಷಣಾ ಗತಿವಿಧಿ ಮಹೇಶ್ ರಾವ್ ಕದಂ.ಎಸ್. ವೃಷಭಾದ್ರಿ ಫೌಂಡೇಷನ್ ಕಾರ್ಯದರ್ಶಿ ಕೆ.ರಮೇಶ್, ಕಠಾರಿ ಪಾಳ್ಯದ ನಗರಸಭಾ ಸದಸ್ಯೆ ಪತಿ ರಾಘವೇಂದ್ರ ಮುಂತಾದವರು ಭಾಗವಹಿಸಿದ್ದರು,