300 ಮಕ್ಕಳಿಗೆ ವಿವಿಧ ಕಾಯಿಲೆಗಳ ಉಚಿತ ಚಿಕಿತ್ಸೆ ಯಶಸ್ವಿ ಜಿಲ್ಲಾಧಿಕಾರಿ ಮೆಚ್ಚುಗೆ
ಕಲಬುರಗಿ, ಮೇ,31: ಮಕ್ಕಳಲ್ಲಿ ಕಂಡುಬರುವ ಹೃದಯ ಸಂಬಂಧಿಸಿದ ಕಾಯಿಲೆ, ಸಿಳು ತುಟಿ, ವಕ್ರ ಪಾದ, ಬೆನ್ನು ಮೂಳೆ, ಸೇರಿದಂತೆ ಹಲವು ಕಾಯಿಲೆಗಳು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪತ್ತೆ ಹಚ್ಚಿ 300 ಮಕ್ಕಳಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ನೀಡಿ ಯಶಸ್ವಿಗೊಳಿಸಿರುವ ಆರ್ ಸಿ ಎಚ್ ಓ ಅಧಿಕಾರಿಗಳ ಕಾರ್ಯಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಪಡೆದಿರುವ ಮಕ್ಕಳ ಮತ್ತು ಪಾಲಕರ ಫಲಾನುಭವಿಗಳ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ವಿವಿಧ ತಾಲೂಕುಗಳಿಂದ ಚಿಕಿತ್ಸೆ ಪಡೆದಿರುವ ಮುದ್ದು ಮಕ್ಕಳ ಯೋಗಕ್ಷೇಮ ವಿಚಾರಿಸಿ ಮಕ್ಕಳ ಜೊತೆಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು ನಂತರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲಿ ಯಶಸ್ವಿಯಾಗಿ ಚಿಕಿತ್ಸೆ ಪಡೆದು ಮಗುವನ್ನು ಎತ್ತಿಕೊಂಡು ಅಪ್ಪಿ ಮುದ್ದಾಡಿದ ಅವರು ಮಾತ್ರ
ಪ್ರೇಮವನ್ನು ಮೆರೆದು ಸಂತಸಗೊಂಡರು. ಈ ಕಾರ್ಯಕ್ರಮದಲ್ಲಿ ಆರ್ ಬಿ ಎಸ್ ಕೆ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಆರ್ ಸಿ ಎಚ್ ಓ ಡಾ. ಶರಣಬಸಪ್ಪ ಕ್ಯಾತಳ್ ಜಿಲ್ಲಾ ಸಂಯೋಜಕರಾದ ಡಾ. ಪ್ರವೀಣ್ ಜೋಶಿ, ಜಿಲ್ಲಾ ಡಿಇಐಸಿ ವ್ಯವಸ್ಥಾಪಕರು ಕೃಷ್ಣಾವಗ್ಗೆ ಡಾ. ವಿನಾಯಕ್ ತಾಟಿ, ಡಾ. ಅಭಿಷೇಕ್, ಡಾ. ಕಾವೇರಿ, ಡಾ. ಬಾಶ್ಗೀರ್, ಡಾ. ವಿ ರ್ ಗೋಗಿ, ಡಾ. ನಾಗರತ್ನ, ಡಾ ಶಿಲ್ಪ, ಡಾ. ರಾಕೇಶ್, ಡಾ. ಗುರುರಾಜ್, ಡಾ. ಮಾಂತೇಶ್,ರಾಜೇಶ್ವರಿ,ಆರ್ ಬಿ ಎಸ್ ಕೆ ತಂಡದ ಸದಸ್ಯರು ವೈದ್ಯಾಧಿಕಾರಿಗಳು ಇದ್ದರು.