ವೈ.ಎ.ಎನ್ ಪರವಾಗಿ ಮತ ಯಾಚನೆ
ಕೋಲಾರ,ಮೇ.೩೧- ಮುಂಬರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿ ಡಾ.ವೈ.ಎ.ನಾರಾಯಣಸ್ವಾಮಿ ಪರವಾಗಿ ನಗರದ ಪ್ರಮುಖ ಶಾಲಾ ಕಾಲೇಜುಗಳಲ್ಲಿ ಕೋಲಾರ ಬಿಜೆಪಿ ವತಿಯಿಂದ ಮತಯಾಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಗೋಕುಲ್ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಸೈನಿಕ್ ಪಬ್ಲಿಕ್ ಸ್ಕೂಲ್, ಶುಭಲ ವಿದ್ಯಾಲಯ, ಚಿನ್ಮಯ ವಿದ್ಯಾಲಯ, ಮಹಿಳಾ ಸಮಾಜ ಶಾಲೆಗಳಲ್ಲಿ ಡಾ.ವೈ.ಎ ನಾರಾಯಣಸ್ವಾಮಿ ಪರವಾಗಿ ಮತಯಾಚನೆಯನ್ನು ಮಾಡುವ ಮೂಲಕ ಕ್ರಮ ಸಂಖ್ಯೆ ೧ ಡಾ.ವೈ.ಎನಾರಾಯಣಸ್ವಾಮಿ ರವರಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ ಅವರನ್ನು ಜಯಶೀಲರಾಗಿ ಮಾಡಬೇಕಾಗಿ ಶಿಕ್ಷಕ ಮತದಾರ ಬಂಧುಗಳಲ್ಲಿ ಮನವಿ ಮಾಡಲಾಯಿತು.
ಪ್ರಚಾರ ಕಾರ್ಯಕ್ರಮದಲ್ಲಿ ಚುನಾವಣೆ ಜಿಲ್ಲಾ ಸಂಚಾಲಕ ಮಾಗೇರಿ ನಾರಾಯಣಸ್ವಾಮಿ ರವರ ನೇತೃತ್ವದಲ್ಲಿ ಕುಡಾ ಮಾಜಿ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಕಾರ್ಯದರ್ಶಿ ಹಾರೋಹಳ್ಳಿ ವೆಂಕಟೇಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅರುಣಮ್ಮ, ಜಿಲ್ಲಾ ಮಾಧ್ಯಮ ಸಂಚಾಲಕ ಪ್ರವೀಣ್‌ಗೌಡ, ಸಹ ಸಂಚಾಲಕ ಕೆಂಬೋಡಿ ನಾರಾಯಣಸ್ವಾಮಿ, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎಮ್ ತಿಮ್ಮರಾಯಪ್ಪ, ನಗರ ಘಟಕದ ಮಹಿಳಾ ಅಧ್ಯಕ್ಷೆ ಸವಿತಾ ಶ್ರೀನಾಥ್, ಮುಖಂಡರಾದ ಹಾರೋಹಳ್ಳಿ ಶ್ರೀನಿವಾಸ್, ವಕೀಲ ನವೀನ್, ಸೋಮೇಶ್ ಇನ್ನು ಹಲವಾರು ಮುಖಂಡರು ಮತಯಾಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ರಮ ಸಂಖ್ಯೆ ೧ ಡಾ.ವೈ.ಎ.ನಾರಾಯಣಸ್ವಾಮಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಬೇಕೆಂದು ಶಿಕ್ಷಕ ಮತದಾರರಲ್ಲಿ ಮನವಿ ಮಾಡಿಕೊಂಡರು.