ಸಂಸ್ಕøತ ಹಾಗೂ ವೈದಿಕ ಸಂಸ್ಕಾರ ಶಿಬಿರ ಸಮಾರೋಪ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.31:ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿ (ರಿ) ಹಾಗೂ ಶ್ರೀ ಗುರುಪಾದಯ್ಯ ಶ್ರೀಶೈಲ ಗಚ್ಚಿನಮಠ ಇವರ ಸಹಯೋಗದೊಂದಿಗೆ ವಿಜಯಪುರ ಮಹಾನಗರದ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಒಂದು ತಿಂಗಳ ಪರ್ಯಂತ ದ್ವಿತೀಯ ವರ್ಷದ ಸಂಸ್ಕøತ ಹಾಗೂ ವೈದಿಕ ಸಂಸ್ಕಾರ ಶಿಬಿರ ನಡೆಯಿತು.
ಗುರುವಾರ ನಡೆದ ಸಮಾರೊಪ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ ಚನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ ನಾಗಠಾಣ ಅವರು ಮಾತನಾಡಿ, ವೀರಶೈವ ಪರಂಪರೆಯಲ್ಲಿ ಆಚಾರ, ವಿಚಾರ, ವೈದಿಕತ್ವ, ಸಂಸ್ಕಾರ ಇಂತಹ ಶಿಬಿರಗಳು ನಡೆಸುವುದು ಮಹತ್ವದ ಕಾರ್ಯವಾಗಿದೆ ಎಂದು ಹೇಳಿದರು.
ವಿಜಯಮಾಹಾಂತೇಶ್ವರಿ ಗುರುಪಾದಯ್ಯ ಗಚ್ಚಿನಮಠ ದಂಪತಿಗಳ 25ನೇ ವಿವಾಹ ವಾರ್ಷಿಕೋತ್ಸವ ಹಾಗೂ ದೈಹಿಕ ಶಿಕ್ಷಕಿ ವiಹಾದೇವಿ ಗುರುಯ್ಯ ಬೂದಿಹಾಳಮಠ ನಿವೃತ್ತಿ ಹೊಂದಿದ ಕಾರಣ ಗೌರವಿಸಿ ಸನ್ಮಾನಿಸಲಾಯಿತು.
ಶಿಬಿರಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಿ ಶ್ರೀಗಳಿಂದ ಆಶಿರ್ವದಿಸಲಾಯಿತು ಹಾಗೂ ಕಣ್ಣಿಗೆ ಕಾಣುವ ದೇವರುಗಳಾದ ತಂದೆ-ತಾಯಿಯ ಪಾದ ಪೂಜೆ ಮಾಡಿ ಸಮಾರೋಪ ಮಾಡಲಾಯಿತು.
ಸಿದ್ದರಾಮೇಶ್ವರ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಗದೀಶ ಹಿರೇಮಠ ಸ್ವಾಗತಿಸಿದರು. ದತ್ತಾತ್ರೇಯ ಹೊಸಮಠ ನಿರೂಪಿಸಿದರು. ಸದಾನಂದ ಹಿರೇಮಠ ವಂದಿಸಿದರು.
ಚಿದಾನಂದ ಹಿರೇಮಠ, ಸಚಿನ ಬೂದಿಹಾಳಮಠ, ಸಚಿನ ಮಠಪತಿ, ಸದ್ದ್ಯೋಜಾತ ಹಿರೇಮಠ, ಸಂಗಮೇಶ ಗುಣಕಿಮಠ, ಮಲ್ಲಿಕಾರ್ಜುನ ಹಿರೇಮಠ, ಅಭಿಷೇಕ ಪಾಟೀಲ, ಎಮ್.ಕೆ. ಹಿರೇಮಠ, ಶ್ರೀಮಂತ ಜಂಬಗಿ, ಬಸವರಾಜ ಮೆಡ್ಲಿ, ಮಂಜುನಾಥ ಹಿರೇಮಠ, ಅರವಿಂದ ಹಿರೇಮಠ, ಪ್ರಸಾದÀ ಯಡಹಳ್ಳಿ ಇದ್ದರು.