ಬಳ್ಳಾರಿ ಒನ್ ನಲ್ಲಿ 75 ಲಕ್ಷ ರೂಕದ್ದವ ತಿಂಗಳ ನಂತರ ಸಿಕ್ಕಿ ಬಿದ್ದ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಇಲ್ಲಿನ ಪಾಲಿಕೆಯ ಆವರಣದಲ್ಲಿದ್ದ ಬಳ್ಳಾರಿ ಒನ್ ಕೇಂದ್ರದಲ್ಲಿ 75 ಲಕ್ಷ ರೂಗಳನ್ನು ಕಳೆದ ತಿಂಗಳ 28 ರಂದು ಕದ್ದವ ಇಂದು ಸಿಕ್ಕಿ ಬಿದ್ದಿದ್ದಾನೆ
ಗಾಂಧಿನಗರ ಠಾಣೆಯ ಪೊಲೀಸರು ಈ ಪ್ರಕರಣದ ತನಿಖೆಯನ್ನು ನಡೆಸಿದ್ದರು.
ಕರ್ನಾಟಕ (ಬಳ್ಳಾರಿ)ಒನ್ ಕೇಂದ್ರದಲ್ಲಿ ಸಾರ್ವಜನಿಕರ ವಿವಿಧ ತೆರಿಗೆಗಳಿಂದ ಸಂಗ್ರಹವಾದ75 ಲಕ್ಷ ರೂ.ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಆದರೆ ಯಾವುದೆ ಕೀ ಗಳು ಮುರಿಯದೇ ಕಳ್ಳತನ ವಾಗಿದೆ ಆ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಕೀ ಗಳನ್ನು ಇಟ್ಟುಕೊಳ್ಳುತ್ತಿದ್ದ ಆಂದ್ರಾಳ್‌ ಗ್ರಾಮದ ಕೆ.ಮಹಾಲಿಂಗ ಈತನು ಸದರಿ ಹಣವನ್ನು ಕಳ್ಳತನ ಮಾಡಿ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾನೆಂದು ಕರ್ನಾಟಕ ಒನ್ ಕೇಂದ್ರದ ರಾಜ್ಯದ ಯೋಜನಾ ವ್ಯವಸ್ಥಾಪಕ ಉದಯ್ ಕುಮಾರ್ ಆರ್ಕಸಾಲಿ ಅವರು ದೂರು ನೀಡಿದ್ದರು.
ವೈಜ್ಞಾನಿಕ ವಿಧಾನಗಳ ಮೂಲಕ ತಾಲೂಕಿನ ಶ್ರೀಧರಗಡ್ಡೆ ಗ್ರಾಮದ ರಾಜೀವ್ ನಗರದಲ್ಲಿ ಪೂಜಾರಿಯಾಗಿದ್ದ. ಎಸ್.ಟಿ.ಎಂ.ಕೆ. ಚಂದ್ರಶೇಖರಯ್ಯ(33) ಅವರನ್ನು ವಿಚಾರಣೆ ಮಾಡಿ 72 ಲಕ್ಷ ರೂಗಳ ನಗದು, ಕೃತ್ಯಕ್ಕೆ ಬಳಸಿದ ಮೋಟರ್ ಸೈಕಲ್ , ಕಳ್ಳತನ ಮಾಡಿ ಖರೀದಿಸಿದ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದೆ.
ಈ ಪ್ರಕರಣದಲ್ಲಿ ಆರೋಪಿ ಕಳ್ಳತನ ಮಾಡಲು ಸದರಿ ಕಛೇರಿಯಲ್ಲಿ ಡಾಡಾ ಎಂಟ್ರಿ ಆಪರೇಟರ್ ಅಂತ ಕೆಲಸ ಮಾಡುತ್ತಿದ್ದ ಅಂದ್ರಾಳಿನ ಕೆ.ಮಹಾಲಿಂಗ ಕಛೇರಿಯ ಬೀಗಗಳನ್ನು ಆರೋಪಿ ಚಂದ್ರಶೇಖರಯ್ಯನಿಗೆ ನೀಡಿದ್ದು, ಆ ಬೀಗಗಳನ್ನು ಉಪಯೋಗಿಸಿಕೊಂಡು ಕಳ್ಳತನ ಮಾಡಿ ಪುನಃ ಬೀಗವನ್ನು ಮಹಾಲಿಂಗನ ಮನೆಯ ಬಾಗಿಲಲ್ಲಿ ಹಾಕಿ ಹೋಗಿದ್ದನಂತೆ.
ಒಟ್ಟು 75 ಲಕ್ಷದಲ್ಲಿ ರೂ.3 ಲಕ್ಷ ಹಣವನ್ನು ಖರ್ಚು ಮಾಡಿದ್ದು, ಉಳಿದ 72 ಲಕ್ಷ ಹಣವನ್ನು ವಶ ಪಡಿಸಿಕೊಳ್ಳಲಾಗಿದೆ. ಆರೋಪಿತ ಚಂದ್ರಶೇಖರಯ್ಯ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.
ಮುಖ್ಯ ಆರೋಪಿಯಾದ ಮಹಾಲಿಂಗನು ಪರಾರಿಯಲ್ಲಿದ್ದು ಆದಷ್ಟು ಬೇಗನೇ ಪತ್ತೆ ಮಾಡಲಾಗುವುದು ಎಂದು ಪ್ರಕರಣವನ್ನು ಬೇಧಿಸಿದ ಗಾಂಧಿನಗರ ಪೊಲೀಸ್ ಠಾಣೆಯ ಪಿ.ಐ. ಸಿದ್ದರಾಮೇಶ್ವರ ಗಡೇದ್ ಹೇಳಿದ್ದಾರೆ.‌