ಇಂದಿರಾ ಸರ್ಕಲ್ ನಿಂದ ಕೆಸಿ ರಸ್ತೆವರೆಗೆ ರಸ್ತೆ ಅಗಲೀಕರಣ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.31:ನಗರದ ಇಂದಿರಾ ಸರ್ಕಲ್ (ಸಂಗಮ್ ಸರ್ಕಲ್) ನಿಂದ ಹಜರತ್ ಜಾನಿ ಮಗ್ದುಮ್ ದರ್ಗಾ ಮಂಭಾಗದಿಂದ ಸಿಂದಿಗಿ ಕಾಂಪೌಂಡ್ ವರೆಗೆ ರಸ್ತೆಯ ಅಗಲೀಕರಣಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಪಾಲಿಕೆಯ ಆಯುಕ್ತರಿಗೆ ನಗರ ಶಾಸಕ ಭರತ್ ರೆಡ್ಡಿ ಸೂಚನೆ ನೀಡಿದ್ದಾರಂತೆ.
ಈ ಕುರಿತು ಶಾಸಕರ ಕಚೇರಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಗುರುವಾರ ಮಧ್ಯಾಹ್ನ ನಗರದ ಗಡಿಗಿ ಚನ್ನಪ್ಪ ಸರ್ಕಲ್, ನಗರೂರು ನಾರಾಯಣರಾವ್ ಪಾರ್ಕ್, ಕಾಟೇಗುಡ್ಡ ಹಾಗೂ ಇಂದಿರಾ ಸರ್ಕಲ್ ರಸ್ತೆಯನ್ನು ಪರಿಶೀಲಿಸಿದರು.
ಇಂದಿರಾ ಸರ್ಕಲ್ ನಿಂದ ಸಿಂದಗಿ ಕಂಪೌಂಡ್ (ಕೆಸಿ ರಸ್ತೆ ಸರ್ಕಲ್) ರಸ್ತೆಯವರೆಗೆ ರಸ್ತೆ ಅಗಲೀಕರಣಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದು ಆಯುಕ್ತ ಖಲೀಲಸಾಬ ಅವರಿಗೆ ಸೂಚಿಸಿದರು.
ಗಡಿಗಿ ಚನ್ನಪ್ಪ ವೃತ್ತದ ಕಾಮಗಾರಿ ಹಾಗೂ ಒತ್ತುವರಿ ತೆರವಾಗಿರುವ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಈ ವೇಳೆ ಪಾಲಿಕೆಯ ಸದಸ್ಯರಾದ ಎಂ.ಪ್ರಭಂಜನಕುಮಾರ್, ರಾಮಾಂಜನೇಯ, ವಿ.ಶ್ರೀನಿವಾಸುಲು (ಮಿಂಚು) ಮೊದಲಾದವರು ಇದ್ದರು.