ಉಚಿತ ಆರೋಗ್ಯ ತಪಾಸಣಾ ಶಿಬಿರ
ಕಲಬುರಗಿ:ಮೇ.30: ತಾಲ್ಲೂಕಿನ ಸೀತನೂರ ಗ್ರಾಮದಲ್ಲಿ ಸೇವಾ ಸಂಗಮ ಸಂಸ್ಧೆ ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮತ್ತು ಮದರ ತೇರೆಸಾ ಚಾರಿಟೆಬಲ್ ಆಸ್ಪತ್ರೆ ಹಾಗೂ ಗ್ರಾಮ ಪಂಚಾಯತ ನಂದಿಕೂರ, ಇವರ ಸಂಯುಕ್ತಾಶ್ರಯದಲ್ಲಿ ಸೀತನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಡಾ. ಗುರುರಾಜ ಕುಲಕರ್ಣಿ, ಡಾ. ಕ್ರಿಷ್ಟಿನಾ, ಕ್ಯಾನ್ಸರ್ ಪೌಂಡೇಶನ್ ಬೆಂಗಳೂರ, ಡಾ. ಅಕ್ಷತಾ, ಹಾಗೂ ಮದರ ತೇರೆಸಾ ಚಾರಿಡೆಬಲ್ ಆಸ್ಪತ್ರೆ ಡಾ. ಹರ್ಶದ, ಡಾ. ಅಬಾಜೋದ್ದಿನ್, ಶರಣಪ್ಪಾ ಅIಔ- Pಊಅ ಹೊನ್ನಕಿರಣಗಿ, ಪ್ರಭಾವತಿ ಸಿಸ್ಟರ್, ಭಾಗ್ಯಾಶ್ರೀ ಸೇಲ್ಕೋ, ಆರಿಫ್, ಅಬುಬಕರ್, ಗ್ರಾಮಸ್ಧರು, ಹಾಗೂ ಸಿಸ್ಟರ್ ಫ್ಯನ್ಸಿ, ಆಶಾ ಕಾರ್ಯಕರ್ತೆಯರು, ಮತ್ತು ಸೇವಾ ಸಂಗಮ ಸಂಸ್ಧೆಯ ಶೀಘ್ರ ಪತ್ತೆ ಹಚ್ಚುವಿಕೆ ಮತ್ತು ಆರಂಭಿಕ ಶಿಕ್ಷಣದ ಸಂಯೋಜಕಿಯಾದ ಶ್ರೀಮತಿ ಶ್ವೇತಾ, ದೀಪ ಬೇಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಡಾ. ಗುರುರಾಜ ಕುಲಕರ್ಣಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಕರ್ನಾಟಕದಾದ್ಯಂತ ಕ್ಯಾನ್ಸರ್ ರೋಗದ ಕುರಿತು ಜಾಗೃತಿ ಕಾರ್ಯಕ್ರಮಗಳು, ಹಾಗೂ ಕ್ಯಾನ್ಸರ್ ಸ್ಕ್ರಿನಿಂಗ್ ನಂತಹ ಉಚಿತ ಶಿಬಿರಗಳನ್ನು ಆಯೋಜಿಸುತಿದೆ. ಶೀಬಿರದಲ್ಲಿ ಪಾಲ್ಗೊಂಡಂತ ಜನರಿಗೆ ಕ್ಯಾನ್ಸರನ ಸ್ಕ್ರಿನಿಂಗ ಮಾಡುವ ಮೂಲಕ ಪತ್ತೆ ಹಚ್ಚು ಸಹಾಯ ಮಾಡುತ್ತದೆ. ಈ ಸಂಸ್ಧೆಯ ಉದ್ದೇಶ ಕ್ಯಾನ್ಸರ್ ನಂತಹ ಮಹಾ ಮಾರಿ ರೋಗವನ್ನು ಹಂತದಲ್ಲಿ ಪತ್ತೆ ಹಚ್ಚಿ ಜನರ ಜೀವವನ್ನು ಉಳಿಸುವುದು ಆಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸೇವಾ ಸಂಗಮ ಸಂಸ್ಧೆಯ ಶೀಘ್ರ ಪತ್ತೆ ಹಚ್ಚುವಿಕೆ ಮತ್ತು ಆರಂಭಿಕ ಶಿಕ್ಷಣದ ಸಂಯೋಜಕಿಯಾದ ಶ್ರೀಮತಿ ಶ್ವೇತಾ, ರವರು ಮಾತನಾಡುತ್ತಾ. ಸೇವಾ ಸಂಗಮ ಸಂಸ್ಧೆಯು ಕಳೆದ 17 ವರ್ಷಗಳಿಂದ ಮಹಿಳೆಯರಿಗೊಸ್ಕರ, ರೈತರಿಗೊಸ್ಕರ, ಮಕ್ಕಳಿಗೊಸ್ಕರ, ಮತ್ತು ವಿಕಲ ಚೇತನರಿಗೊಸ್ಕರ, ಕಾರ್ಯ ನಿರ್ವಹಿಸುತ್ತಾ ಬಂದಿದೆ. ಅದೆ ರೀತಿಯಾಗಿ ಈ ಕ್ಯಾನ್ಸರ್ ಎನ್ನುವ ರೋಗವು ಇತ್ತಿಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಆದ ಕಾರಣ ನಿಮ್ಮ ಊರಿನಲ್ಲಿ ಉಚಿತ ಆರೋಗ್ಯ ತಪಾಸಣ ಶೀಬಿರವು ಹಮ್ಮಿಕೊಳ್ಳಲಾಗಿದೆ, ಈ ಶೀಬಿರದ ಸುಪಯೋಗವನ್ನು ಗ್ರಾಮದ ಜನರು ಹೆಚ್ಚಿನ ಪ್ರಮಾಣದಲ್ಲಿ ಬಂದು ಈ ಶೀಬಿರದ ಸದುಪಯೋಗವನ್ನು ಪಡೆಯಿರಿ ಎಂದು ತಿಳಿಸಿದರು.
ಸೇವಾ ಸಂಗಮ ಸಂಸ್ಧೆಯ ಸ್ಪರ್ಶ ಕಾರ್ಯಕ್ರಮದ ಸಂಯೋಜಕಿಯಾದ ಶ್ರೀಮತಿ ಸ್ವಾತಿ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಈ ಆರೋಗ್ಯ ತಪಾಸಣ ಶಿಬಿರವು ಊರಿನ ಜನರೆಲ್ಲರು ಪ್ರಯೋಜನವನ್ನು ಪಡೆದುಕೊಳ್ಳಬೇಕು. ಈ ಶಿಬಿರದಲ್ಲಿ ವಿಶೇಷವಾಗಿ ಗರ್ಭಕೋಶ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ರಕ್ತ ಕ್ಯಾನ್ಸರ್, ಮತ್ತು ಸ್ತನ ಕ್ಯಾನ್ಸರ್, ಪರೀಕ್ಷೆ ಮಾಡಲಾಗುವುದು, ಆದ್ದರಿಂದ ಎಲ್ಲಾ ಊರಿನ ಜನರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ಶೀಬಿರದ ಸದುಪಯೋಗವನ್ನು ಪಡೆಯಬಹುದು ಎಂದು ತಿಳಿಸಿದರು.
ಶ್ರೀ ರಾಜಕುಮಾರ ಸ್ವಾಗತಿಸಿ, ಕುಮಾರ ನವಿನ ವಂದಿಸಿ, ಶ್ರೀಮತಿ ನಂದಿನಿ ನಿರೂಪಿಸಿದರು.
ಇದರಲ್ಲಿ ನಂದಿಕೂರ ಗ್ರಾಮ ಪಂಚಾಯತಿಯ ಆಡಳಿತ ವರ್ಗ, ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ವೈದ್ಯಕಿಯ ತಂಡ ಹಾಗೂ ಮದರ ತೇರೆಸಾ ಚಾರಿಟೆಬಲ್ ಆಸ್ಪತ್ರೆ, ಹೊನ್ನಕಿರಣಗಿ Pಊಅ ಯ ಆರೋಗ್ಯ ಸಹಾಯಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸೇವಾ ಸಂಗಮ ಸಂಸ್ಧೆಯ ಸಿಬ್ಬಂದು ವರ್ಗದವರು ಮತ್ತು ಗ್ರಾಮದ ಜನರು ಭಾಗವಹಿಸಿದರು.
ಈ ಶೀಬಿರದಲ್ಲಿ ಒಟ್ಟು 86 ಜನ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದು ಕೊಂಡರು.