ನೀರಿನ ಹೊಂಡಕ್ಕೆ ಬಿದ್ದು ಬಾಲಕ ಸಾವು:  ಶಾಸಕ ಗವಿಯಪ್ಪ ಸಾಂತ್ವನ
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ) ಸೆ24:ಹೊಸಪೇಟೆ ತಾಲೂಕಿನ ಗುಂಡ್ಲುವದ್ದಿಗೇರಿ ಗ್ರಾಮದ ಅಜಯ ಎಂಬ ಬಾಲಕನು ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆ, ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಧಾವಿಸಿ, ಬಾಲಕನ ಪೋಷಕರಿಗೆ ಸಾಂತ್ವನ ಹೇಳಿದರು. ಇದೆ ವೇಳೆ ಸ್ವಂತ ಅನುಧಾನವನ್ನು ಶಾಸಕರು ಧನ ಸಹಾಯ ಮಾಡಿದರು.
ಇಂತಹ ದುರ್ಘಟನೆಗಳು ತಾಲೂಕಿನಲ್ಲಿ ಮರುಕಳಿಸದ ಹಾಗೆ ಸೂಕ್ತ ಕ್ರಮವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಶಾಸಕರು ಇದೆ ವೇಳೆ ತಿಳಿಸಿದರು. ಈ ವೇಳೆ ಗ್ರಾಮಸ್ಥರು ಸಭೆಯಲ್ಲಿ ಇದ್ದರು.